ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವುದಕ್ಕೆ ಬೇಕಾಗಿರುವುದು ಇಷ್ಟೇ ದಾಖಲಾತಿಗಳು ರೇಷನ್ ಕಾರ್ಡ್ ಇಲ್ಲದಿದ್ದವರಿಗೂ ಅವಕಾಶವಿದೆ ಹೀಗೆ ಮಾಡಿ……||
ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಾವು ಯಾವ ಐದು ಗ್ಯಾರಂಟಿಯನ್ನು ಹೇಳಿದ್ದರೋ ಅದನ್ನು ಜಾರಿ ಗೊಳಿಸುತ್ತಿದ್ದಾರೆ ಎಂದೇ ಹೇಳಬಹುದು. ಹೌದು ಅದರಲ್ಲಿ ಒಂದಾಗಿರು ವಂಥದ್ದು ಗೃಹಲಕ್ಷ್ಮಿ ಯೋಜನೆ ಹೌದು ಮನೆಯ ಮುಖ್ಯಸ್ಥೆಗೆ ಪ್ರತಿ ತಿಂಗಳು 2000 ಹಣ ಬರುತ್ತದೆ.
ಹಾಗಾದರೆ ಯಾವ ಮಹಿಳೆಯರು ಈ ಒಂದು ಗೃಹಲಕ್ಷ್ಮಿ ಯೋಜನೆ ಯನ್ನು ಪಡೆದುಕೊಳ್ಳಬಹುದು ಹಾಗೂ ಯಾರೆಲ್ಲಾ ಅರ್ಹರಿದ್ದಾರೆ ಹಾಗೂ ಎಲ್ಲಿ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ? ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ? ಯಾವ ವೆಬ್ಸೈಟ್ ನಲ್ಲಿ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ? ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ.
ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರ ಯಾವ ಐದು ಗ್ಯಾರಂಟಿ ಯನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ್ದರೋ ಅವೆಲ್ಲವನ್ನು ಸಹ ನೀವು ಸೇವಾ ಸಿಂಧು ವೆಬ್ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಗ್ರಾಮ1, ಬೆಂಗಳೂರು1, ಹೀಗೆ ಕೆಲವೊಂದು ಸ್ಥಳಗಳಲ್ಲಿಯೂ ಕೂಡ ನೀವು ನೇರವಾಗಿ ಅರ್ಜಿಯನ್ನು ಸಲ್ಲಿಸಬಹು ದಾಗಿದೆ ಅದರಲ್ಲೂ ನೀವು ಸೇವಾ ಸಿಂಧು ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಎಂದರೆ ನೀವು ಮೊದಲು ಅಲ್ಲಿ ರಿಜಿಸ್ಟರ್ ಆಗಬೇಕಾಗುತ್ತದೆ.
ಆನಂತರ ನೀವು ಯಾವ ಒಂದು ಅರ್ಜಿಯನ್ನು ಸಲ್ಲಿಸಬೇಕೋ ಆ ಅರ್ಜಿಯನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕೇಳುವಂತಹ ಎಲ್ಲ ದಾಖ ಲಾತಿಗಳನ್ನು ಹಾಕಿದರೆ ನೀವು ಈ ಅರ್ಜಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗಾದರೆ ಗೃಹಲಕ್ಷ್ಮಿ ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದರೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹೇಗೆ ಹಾಕುವುದು ಈ ಒಂದು ಅರ್ಜಿಯನ್ನು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ಮೊದಲು ನೀವು ಈ ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ ಎಂದು ನೋಡುವುದಾ ದರೆ ಆ ಮಹಿಳೆಯ ಆಧಾರ್ ಕಾರ್ಡ್ ಬೇಕಾಗುತ್ತದೆ ಹಾಗೂ ಆ ಮಹಿಳೆಯ ಪತಿ ಅಥವಾ ಮಕ್ಕಳ ಆಧಾರ್ ಕಾರ್ಡ್ ಸಂಖ್ಯೆ ಬೇಕಾಗುತ್ತದೆ ಹಾಗೂ ಆ ಒಂದು ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಇರಬೇಕಾಗುತ್ತದೆ.
ಹಾಗೂ ಇದರ ಜೊತೆ ಬಹಳ ಪ್ರಮುಖವಾಗಿ ಆ ಮಹಿಳೆಯ ಬ್ಯಾಂಕ್ ಅಕೌಂಟ್ ನಂಬರ್ ಎಲ್ಲವೂ ಕೂಡ ಬೇಕಾಗುವಂತದ್ದು ಯಾಕೆ ಎಂದರೆ ಆ ಒಂದು ಬ್ಯಾಂಕ್ ಅಕೌಂಟ್ ಗೆ ಅವರ ಹಣ ಪ್ರತಿ ತಿಂಗಳು ಬರುತ್ತದೆ ಆದ್ದರಿಂದ ಈ ಎಲ್ಲಾ ದಾಖಲಾತಿಗಳು ಇದ್ದರೆ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.