ಕನ್ನಡ ಹಾಗೂ ತೆಲುಗು ಅಕ್ಷರಗಳು ಯಾಕೆ ಒಂದೇ ರೀತಿ ಇರುತ್ತವೆ.ಗೊತ್ತಾ ?

ಕನ್ನಡ ಮತ್ತು ತೆಲುಗು ಅಕ್ಷರಗಳು ಯಾಕೆ ಒಂದೇ ರೀತಿ ಇವೆ ಗೊತ್ತಾ….?

WhatsApp Group Join Now
Telegram Group Join Now

2008ರಲ್ಲಿ ದಶಾವತಾರಂ ಎಂಬ ಬಹುನಿರೀಕ್ಷಿತ ತಮಿಳಿನ ಚಿತ್ರವೊಂದು ತೆರೆ ಕಂಡಿತು. ಇದರಲ್ಲಿ ನಾಯಕನಟ ಕಮಲ್ ಹಾಸನ್ 10 ವಿವಿಧ ಶೇಡ್ ಇದ್ದಂತಹ ಪಾತ್ರವನ್ನು ನಟಿಸಿದ್ದರು ಅದರಲ್ಲಿ ಅವರು ನಟಿಸಿದಂತಹ ಬಲರಾಮ್ ನಾಯ್ಡು ಎಂಬ ಇನ್ವೆಸ್ಟಿಗೇಟಿಂಗ್ ಅಧಿಕಾರಿಯ ಪಾತ್ರ ಕೂಡ ಒಂದು. ಇದು ಆ ಚಿತ್ರದಲ್ಲಿ ಮೂಲತಃ ತೆಲುಗು ಭಾಷಿಕ ಪಾತ್ರ.

ಚಿತ್ರದ ಒಂದು ದೃಶ್ಯದಲ್ಲಿ ಬಲರಾಮ್ ನಾಯ್ಡು ಕನ್ನಡಿಗ ಯುವಕನೊಬ್ಬ ನನ್ನು ನೋಡಿ ನೀನು ತೆಲುಗು ಹುಡುಗನ ಎಂದು ಕೇಳುತ್ತಾರೆ. ಆಗ ಯುವಕ ಇಲ್ಲ ನಾನು ಕನ್ನಡಿಗ ಎಂದು ಹೇಳುತ್ತಾನೆ. ಆಗ ಬಲರಾಮ್ ನಾಯ್ಡು ಪರವಾಗಿಲ್ಲ ಎರಡು ಭಾಷೆಗಳ ಸ್ಕ್ರಿಪ್ಟ್ ಕೂಡ ಒಂದೇ ಅಲ್ವಾ ಅಂತ ಹೇಳುತ್ತಾರೆ. ಹೌದು ಇದು ಹಾಸ್ಯದ ಸನ್ನಿವೇಶದಂತೆ ಕಂಡರೂ ಕೂಡ.

ಈ ಒಂದು ವಿಷಯ ಗಂಭೀರ ಚರ್ಚೆಯನ್ನು ಹುಟ್ಟು ಹಾಕುವಂತಿದೆ. ಏಕೆಂದರೆ ತೆಲುಗು ಹಾಗೂ ಕನ್ನಡ ಭಾಷೆಯ ಲಿಪಿಗಳು ಬಹುಮಟ್ಟಿಗೆ ಹೋಲುತ್ತದೆ. ನೀವು ಗಮನಿಸಿದ್ದೆ ಆದರೆ ಭಾರತದ ಎಲ್ಲಾ ಭಾಷೆಗಳ ನಡುವೆ ಒಂದಲ್ಲ ಒಂದು ವಿಧದ ಸಾಮ್ಯತೆ ಎದ್ದು ಕಾಣುತ್ತದೆ. ಅದರಲ್ಲೂ ಬಹಳ ವಿಶೇಷವಾಗಿ ದಕ್ಷಿಣ ಭಾರತದ ಭಾಷೆಗಳಲ್ಲಿ ಅನೇಕಾರು ಸಾಮ್ಯತೆಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತವೆ.

ಭಾರತದ ಎಲ್ಲಾ ಭಾಷೆಗಳನ್ನು ಕೂಡ ಸ್ತೂಲವಾಗಿ ದ್ರಾವೀಡ ಹಾಗೂ ದ್ರಾವೀಡೇತರ ಭಾಷೆಗಳು ಎಂದು ವರ್ಗೀಕರಿಸಲಾಗಿದೆ. ದಕ್ಷಿಣದ ಭಾಷೆಗಳಾದಂತಹ ಕನ್ನಡ ತಮಿಳು ಮಲಯಾಳಂ ಹಾಗೂ ತೆಲುಗು ಭಾಷೆಗಳನ್ನು ದ್ರಾವೀಡ ಭಾಷೆಗಳು ಎಂದು ಕರೆಯಲಾಗುತ್ತದೆ. ಇವು ದ್ರಾವೀಡ ಭಾಷೆಗಳಾದರೂ ಕೂಡ ದೇವ ಭಾಷೆ ಎಂದು ಕರೆಸಿ ಕೊಂಡಂತಹ ಸಂಸ್ಕೃತ ಭಾಷೆಯಿಂದ ಸಾಕಷ್ಟು ಪ್ರಭಾವಿತಗೊಂಡಿದೆ. ದ್ರಾವಿಡ ಭಾಷೆಯಲ್ಲಿ ಸಂಸ್ಕೃತವನ್ನು ಹೆಚ್ಚು

ಅವಲಂಬಿಸದೆ ಇರುವಂತಹ ಭಾಷೆಗಳಲ್ಲಿ ತಮಿಳಿಗೆ ಪ್ರಧಾನವಾದಂತಹ ಸ್ಥಾನ ಇದೆ. ಇದರ ನಂತರದ್ದೆ ಕನ್ನಡ. ಪುರಾವೆಗಳ ಪ್ರಕಾರ ಕನ್ನಡ ಭಾಷೆಗೆ ಎರಡು ಸಹಸ್ರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇದೆ. ಇನ್ನು ಕೆಲವರ ಪ್ರಕಾರ ತಮಿಳು ಭಾಷೆ ಅತ್ಯಂತ ಪುರಾತನ ದ್ರಾವಿಡ ಭಾಷೆ ಅಂತ ಹೇಳುವವರಿದ್ದಾರೆ ಕನ್ನಡ ಹಾಗೂ ತಮಿಳಿನ ಎಷ್ಟೋ ಪದಗಳು ಒಂದೇ ರೀತಿ ದುರಿಸುತ್ತವಾದರೂ.

ತಮಿಳಿನ ಲಿಪಿಗೆ ಹಾಗೂ ಕನ್ನಡದ ಈಗಿನ ಲಿಪಿಗೂ ಸ್ವಲ್ಪ ಕೂಡ ಹೋಲಿಕೆ ಇಲ್ಲ ಆದರೆ ಹಳೆಗನ್ನಡದಲ್ಲಿ ಲಿಪಿಗೂ ಹಾಗು ಈಗಿನ ತಮಿಳಿನ ಲಿಪಿಗೂ ಸ್ವಲ್ಪ ಹೋಲಿಕೆ ಇದೆ. ಆದರೆ ತೆಲುಗು ಹಾಗೂ ಕನ್ನಡವನ್ನು ಹೋಲಿಸಿದರೆ ಸಾಕಷ್ಟು ಹೋಲಿಕೆ ಇದೆ ಇವೆರಡು ಕೂಡ ಸೋದರಿ ಭಾಷೆಗಳು ಎಂದೇ ಕರೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]