ನಿಮ್ಮ ಮುಖದಲ್ಲಿ ಮೊಡವೆಗಳಿದ್ಯಾ? ಆಯಿಲ್ ಸ್ಕಿನ್ ಹಾ ಆಗಿದ್ದರೆ ಈ ಮನೆ ಮದ್ದು ಮಾಡಿ. ಮುಖ ಹೊಳೆಯುತ್ತದೆ.

ಇವತ್ತು ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಉಪಯೋಗಿಸಿ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎಂದು ತಿಳಿಸುತ್ತೇವೆ. ಇದನ್ನು ಎಲ್ಲ ತರಹದ ಚರ್ಮದವರು ಹಾಗೂ ಹುಡುಗರು ಉಪಯೋಗಿಸಬಹುದು. ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಉಪಯೋಗಿಸುವುದರಿಂದ ಅಡ್ಡ ಪರಿಣಾಮಗಳಾಗುವುದಿಲ್ಲ. ಈ ಪ್ಯಾಕ್ ನಿಂದ ಮೊಡವೆಗಳು ಕಡಿಮೆಯಾಗುತ್ತಾ ಬರುತ್ತದೆ ಮತ್ತು ಸ್ಕಿನ್ ಟ್ಯಾನ್ ಕಡಿಮೆಯಾಗಿ ಮುಖವು ಬೆಳ್ಳಗಾಗುತ್ತದೇ ಮತ್ತು ಹೆಚ್ಚಾಗಿ ಆಯ್ಲಿ ಸ್ಕಿನ್ ಇರುವವರಿಗೆ ಈ ಫೇಸ್ ಪ್ಯಾಕ್ ತುಂಬಾ ಉಪಯೋಗಕಾರಿ ಆಗುತ್ತದೆ.
*ಫೇಸ್ ಪ್ಯಾಕ್ ಮಾಡುವ ವಿಧಾನ*
ಒಂದು ಬಟ್ಟಲಿಗೆ 1/2 ಟೀ ಚಮಚ ಕಡಲೆಹಿಟ್ಟು, 1/4 ಟೀ ಚಮಚ ಕಸ್ತೂರಿ ಹಳದಿ,1 ಟೀ ಚಮಚ ಮೊಸರು ಮತ್ತು 1/2 ಟೀ ಚಮಚ ನಿಂಬೆರಸ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ. ಕೆಲವರಿಗೆ ಮೊಸರು ಹೊಂದುವುದಿಲ್ಲ ಅಂತವರು ಹಸಿ ಹಾಲನ್ನು ಹಾಕ್ಕಿಕೊಳ್ಳಬಹುದು.

WhatsApp Group Join Now
Telegram Group Join Now


*ಹಚ್ಚುವ ವಿಧಾನ*
ಈ ಫೇಸ್ ಪ್ಯಾಕ್ ಅನ್ನು ಹಚ್ಚುವ ಮೊದಲು ಮುಖವನ್ನು ತೊಳೆಯಬೇಕು ನಂತರ ಈ ಪ್ಯಾಕ್ ಅನ್ನು ಹಚ್ಚಬೇಕು.
ಇದರಲ್ಲಿರುವ ಕಡಲೆಹಿಟ್ಟು ನಿಮ್ಮ ಮುಖದ ಮೊಡವೆಯನ್ನು ಕಡಿಮೆ ಮಾಡುತ್ತದೆ ಮತ್ತು ಬಿಸಿಲಿನಿಂದ ಆಗಿರುವ ಸಂಟನ್ ಕಡಿಮೆ ಮಾಡುತ್ತೆ. ಆಯಿಲ್ ಸ್ಕಿನ್ ಇರುವರಿಗೆ ಮುಖದಲ್ಲಿರುವ ಜಿಡ್ಡು ಕಡಿಮೆಯಾಗುತ್ತೆ.ಅರಿಶಿನಪುಡಿಯು ಆಂಟಿಬ್ಯಾಕ್ಟರಿಯಲ್ ಆಗಿರುವುದರಿಂದ ನಿಮ್ಮ ಮುಖದಲ್ಲಿರುವ ಮೊಡವೆ ಕಡಿಮೆ ಮಾಡುತ್ತದೆ.ಮೊಸರು ಚರ್ಮವನ್ನು ಬೆಳ್ಳಗಾಗಲು ಸಹಾಯಮಾಡುತ್ತದೆ. ನಿಂಬೆ ಹಣ್ಣಿನಲ್ಲಿರುವ ವಿಟಮಿನ್-ಸಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.ಈಗ ಹಚ್ಚಿರುವ ಪ್ಯಾಕನ್ನು 15 ನಿಮಿಷ ಒಣಗಲು ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ.