ನೀವು ಇಷ್ಟ ಪಟ್ಟು ತಿನ್ನುವ 'ಕುರ್ ಕುರೆ' ಯನ್ನು ಹೇಗೆ ತಯಾರು ಮಾಡ್ತಾರೆ ಗೊತ್ತಾ ಪಕ್ಕಾ ಶಾಕ್ ಆಗ್ತೀರಾ ಲೈವ್ ವಿಡಿಯೋ ನೋಡಿ - Karnataka's Best News Portal

ಕುರ್ಕುರೆ ಎಂದ ತಕ್ಷಣ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲಾರ ಬಾಯಲ್ಲಿ ನೀರು ಬರುತ್ತದೆ ಏಕೆಂದರೆ ಆ ಕುರ್ ಕುರೆ ಗೆ ಹಾಕಿರುವಂತಹ ಮಸಾಲೆ ಬಾಯಲ್ಲಿ ನೀರು ಬರುವಂತೆ ಮಾಡುತ್ತದೆ. ಇನ್ನೂ ಈ ಕುರ್ಕುರೆಯನ್ನು ಯಾವ ರೀತಿ ಮಾಡುತ್ತಾರೆ ಹಾಗೂ ಯಾವ ಪ್ರಮಾಣವನ್ನು ಇದಕ್ಕೆ ಪಾದರ್ಥಗಳನ್ನು ಹಾಕಬೇಕು ಎಂಬ ಮುಂತಾದ ವಿಚಾರಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಕುರುಕುರೆ ತಯಾರಿಸಿರುವ ಫ್ಯಾಕ್ಟರಿ ಕಲ್ಕತ್ತಾ ನಗರದಲ್ಲಿ ಇದೆ ಈ ಕೂರ್ಕುರೆ ಮಾಡಲು ನಿಮಗೆ ಮುಖ್ಯವಾಗಿ ಜೋಳದ ಹಿಟ್ಟು, ಕಡ್ಲೆಹಿಟ್ಟು, ಮತ್ತು ಸ್ಪೈಸ್ ಮಸಾಲೆ ಈ ಮೂರು ಪದಾರ್ಥಗಳು ಬೇಕಾಗುತ್ತದೆ. ಮೊದಲಿಗೆ ಜೋಳದ ಹಿಟ್ಟು ಮತ್ತು ಕಡ್ಲೆಹಿಟ್ಟು ಸ್ಪೈಸ್ ಮಿಕ್ಸ್ ಮಸಾಲ ಈ ಪದಾರ್ಥಗಳನ್ನು ಖರೀದಿಸಿದ ನಂತರ ಅದನ್ನು ಟೆಸ್ಟಿಂಗ್ ಮಾಡುತ್ತಾರೆ ಅಲ್ಲಿ ಕ್ವಾಲಿಟಿ ಚೆನ್ನಾಗಿದೆ ಮುಂದಿನ ಕೆಲಸವನ್ನು ಆರಂಭಿಸುತ್ತಾರೆ. ಈಗ ಜೋಳದ ಹಿಟ್ಟು ಮತ್ತು ಕಡಲೆಹಿಟ್ಟು ಈ ಎರಡನ್ನು ಕೂಡ ಒಂದು ಕಡೆ ಮಿಕ್ಸ್ ಮಾಡುತ್ತಾರೆ

ನಂತರ ಪ್ಯೂರಿಫೈರ್ ನೀರು ಹಾಕಿ ಎಲ್ಲವನ್ನು ಚೆನ್ನಾಗಿ ಕಲಸುತ್ತಾರೆ ಇದು ಮಿಕ್ಸ್ ಆದನಂತರ ಎಕ್ಸ್ಟ್ರಾಕ್ಟ್ ಮಿಷಿನ್ ಒಳಗೆ ಇದನ್ನು ಹಾಕುತ್ತಾರೆ. ಅದರ ಒಳಗೆ ಈ ಮಿಶ್ರಣ ತನಗೆ ಬೇಕಾದ ಆಕೃತಿಯನ್ನು ಪಡೆದುಕೊಂಡು ಹೊರಬರುತ್ತದೆ ನಂತರ ಇದನ್ನು ಕಾದ ಎಣ್ಣೆಗೆ ಹಾಕಲಾಗುತ್ತದೆ. ಕುರ್ ಕುರೆ ಕ್ರಿಸ್ಪಿನೆಸ್ ಬರುವ ತನಕ ಎಣ್ಣೆಯಲ್ಲಿ ಚೆನ್ನಾಗಿ ಕರಿಯುತ್ತಾರೆ ನಂತರ ಕೊನೆಯ ಹಾಗೂ ಬಹಳ ಮುಖ್ಯವಾದ ಅಂತ ಅಂದರೆ ಎಣ್ಎಯಲ್ಲಿ ಕರಿದ ಕುರ್ ಕುರೆಗೆ ಸ್ಪೈಸ್ ಮಸಾಲೆ ಮಿಕ್ಸ್ ಮಾಡುತ್ತಾರೆ. ಭಾರತದಲ್ಲಿ ಕುರ್ ಕುರೆ ಇಷ್ಟು ಫೇಮಸ್ ಆಗಿರುವುದಕ್ಕೆ ಕಾರಣ ಸ್ಪೈಸ್ ಮಿಕ್ಸ್ ಮಸಾಲೆ ಕುರ್ ಕುರೆಗೆ ಚೆನ್ನಾಗಿರುವ ತನಕ ಕಂಟೈನರ್ ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾರೆ ನಂತರ ಇದನ್ನು ಡೈರೆಕ್ಟ್ ಪ್ಯಾಕಿಂಗ್ ಮಾಡುತ್ತಾರೆ.

By admin

Leave a Reply

Your email address will not be published. Required fields are marked *