ಓದಿರುವುದು ಶಾಶ್ವತವಾಗಿ ನೆನಪಿನಲ್ಲಿ ಉಳಿಯಬೇಕು ಅಂದರೆ ಈ ತರಹ ಓದಿ..ನಾವು ಹೇಳುವಂತಹ ಈ ಒಂದು ಸರಳ ಸೂತ್ರವನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಓದಿರುವುದನ್ನು ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಇದರಿಂದ ನೀವು ಉತ್ತಮವಾದಂತಹ ಅಂಕವನ್ನು ಕೂಡ ಪಡೆಯಬಹುದು ಅಷ್ಟೇ ಅಲ್ಲದೆ ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು. ನಿಮ್ಮ ಜೀವನ ಕೂಡ ಇದು ತುಂಬಾನೇ ಸಹಾಯವಾಗುತ್ತದೆ. ಮೊದಲನೇ ನೀವು ತಿಳಿದುಕೊಳ್ಳಬೇಕಾದ ವಿಚಾರ ಏನೆಂದರೆ ಬುದ್ಧಿಶಕ್ತಿಯೇ ಬೇರೆ, ನೆನಪಿನ ಶಕ್ತಿಯೇ ಬೇರೆ. ನೆನಪಿನ ಶಕ್ತಿ ನಾವು ಯಾವುದಾದರೂ ಒಂದು ವಿಚಾರವನ್ನು ನೆನಪಿಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಆದರೆ ಬುದ್ಧಿಶಕ್ತಿ ನಾವು ನೋಡಿದಂತಹ ವಿಚಾರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ನಿಮಗೆ ಯಾವುದಾದರೂ ಒಂದು ವಿಷಯ ಅರ್ಥ ಆಗುತ್ತದೆ ಅಂತ ತಿಳಿದುಕೊಂಡರೆ ಅದನ್ನು ನೀವು ಎಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ.
ನೀವು ಯಾವುದಾದರೂ ಒಂದು ವಿಚಾರವನ್ನು ನೆನಪಿಟ್ಟುಕೊಳ್ಳುವುದಕ್ಕೆ ಪ್ರಯತ್ನ ಪಟ್ಟರೆ ಅಂದರೆ ಉದಾಹರಣೆಗೆ ನೀವು ಯಾವುದೋ ಒಂದು ವಿಚಾರಕ್ಕಾಗಿ ಒಂದು ವಿಷಯವನ್ನು ಬರೆದು ಕಲಿಯುವುದು ಅಥವಾ ಬಾಯ್ ಹಾಟ್ ಮಾಡಿಕೊಳ್ಳುವುದು ಈ ರೀತಿ ಮಾಡಿಕೊಂಡರೆ ಒಂದು ವಿಚಾರವನ್ನು ನೀವು ಆದಷ್ಟು ಬೇಗ ಮರೆಯುತ್ತೀರಾ. ಹಾಗಾಗಿ ನೀವು ಇದರ ಬದಲಾಗಿ ಅರ್ಥಮಾಡಿಕೊಳ್ಳುವುದು ಕಲಿತರೆ ಒಳ್ಳೆಯದು ಏಕೆಂದರೆ ವಿಚಾರವನ್ನು ಅರ್ಥಮಾಡಿಕೊಂಡರೆ ಆ ವಿಚಾರವನ್ನು ನೀವು ಎಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ನೀವು ಒಂದು ವಿಚಾರದ ಬಗ್ಗೆ ಅರ್ಥ ಮಾಡುವುದನ್ನು ಕಲಿತರೆ ಆ ವಿಚಾರವನ್ನು ನೀವು ಮರೆಯಬೇಕು ಅಂತ ಅಂದುಕೊಂಡರೂ ಕೂಡ ಅದನ್ನು ಮರೆಯುವುದು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಈ ಒಂದು ಪದ್ಧತಿಯನ್ನು ನೀವು ಓದಿನ ವಿಷಯದಲ್ಲೂ ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ.
ಓದಿರುವುದು ಶಾಶ್ವತವಾಗಿ ನೆನಪಿನಲ್ಲಿ ಉಳಿಯಬೇಕು ಅಂದ್ರೆ ಈ ತರಹ ಓದಿ ಪವರ್..ಟೆಕ್ನಿಕ್…ಆಮೇಲೆ ನೋಡಿ ಬದಲಾವಣೆ..
Uncategorized
[irp]