ಅಪಘಾತದಲ್ಲಿ ಸಮನ್ವಿ ಸಾವು ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು ಗೊತ್ತಾ.?ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಕಾರಣ ಸ್ಥಳದಲ್ಲಿ ಸಮನ್ವಿ ಸಾವನ್ನಪ್ಪಿದ್ದಾಳೆ ತಾಯಿ ಗಂಭೀರ ಗಾಯಗೊಂಡಿದ್ದಾರೆ ಅದರಲ್ಲಿ ಆರು ವರ್ಷದ ಸಮನ್ವಿ ಎಂಬ ಬಾಲಕಿ ದಾರುಣವಾಗಿ ಹತ್ಯೆಯಾಗಿದ್ದಾರೆ. ಸಮನ್ವಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು ನೆನ್ನೆ ಸಂಜೆ 5.30 ರ ವೇಳೆಗೆ ಅಮೃತ ನಾಯ್ಡು ಹಾಗೂ ಸಮನ್ವಿ ಅವರು ಕೋಣನಕುಂಟೆಯ ಡಿ ಮಾರ್ಟ್ ಶಾಪಿಂಗ್ ಕಂಪ್ಲೇಕ್ಸ್ ಗೆ ಶಾಪಿಂಗ್ ಮಾಡುವ ಉದ್ದೇಶದಿಂದ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಾರೆ. ಶಾಪಿಂಗ್ ಎಲ್ಲಾ ಮುಗಿಸಿಕೊಂಡು ಮತ್ತೆ ಹಿಂತಿರುಗಿ ಮನೆಗೆ ಹೋಗಬೇಕಾದರೆ ಈ ಒಂದು ದುರ್ಘಟನೆ ನಡೆದಿದೆ. ಕೋಣನಕುಂಟೆ ರಸ್ತೆಯಲ್ಲಿ ಮೆಟ್ರೋ ಸ್ಟೇಷನ್ 223 ಪಿಲ್ಲರ್ ಬಳಿ ಈ ಘಟನೆ ನಡೆದಿದೆ ವೇಗವಾಗಿ

ಬರುತ್ತಿದ್ದಂತಹ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುತ್ತದೆ ಸಮನ್ವಿ ಟಪ್ಪರ್ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪುತ್ತಾಳೆ‌.ಅಲ್ಲದೆ ಸಮನ್ವಿ ಅವರ ತಾಯಿಯ ಅಮೃತ ನಾಯ್ಡು ಅವರಿಗೂ ಕೂಡ ಗಂಭೀರ ಗಾಯಗಳಾಗಿದ್ದು ಅವರನ್ನು ಇದೀಗ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ನೀಡುತ್ತಿದ್ದರೆ. ಈ ಒಂದು ಘಟನೆ ನೋಡಿದಂತಹ ಪ್ರತ್ಯಕ್ಷದರ್ಶಿಗಳು ನಿಜಕ್ಕೂ ತುಂಬಾನೇ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಪುಟ್ಟ ಪೋರಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಕರ್ನಾಟಕದತ್ಯಂತ ಹೆಸರುವಾಸಿಯಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಳು. ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಂತಹ ಸಮನ್ವಿ ಈ ರೀತಿಯಾಗಿ ಪುಟ್ಟ ವಯಸ್ಸಿಗೆ ತನ್ನ ಬದುಕಲು ಕಳೆದುಕೊಂಡದ್ದು ನಿಜಕ್ಕೂ ತುಂಬಲಾರದ ನಷ್ಟ ಅಂತನೇ ಹೇಳಬಹುದು. ಈ ಒಂದು ಘಟನೆಯಿಂದಾಗಿ ಸಾರ್ವಜನಿಕರು ಹಾಗೂ ಚಿತ್ರರಂಗ ಕಿರುತೆರೆ ಎಲ್ಲರಿಗೂ ಕೂಡ ಆಘಾತ ಉಂಟಾಗಿದೆ.

By admin

Leave a Reply

Your email address will not be published. Required fields are marked *