ಒಂದೇ ಒಂದು ಮಾವಿನಕಾಯಿ ಇಂದ ಮನೆ ಮಂದಿ ಎಲ್ಲಾ ಹೊಟ್ಟೆ ತುಂಬಾ ಊಟ ಮಾಡಬಹುದು ಈ instant ಅಡುಗೆಯಿಂದ.
ಮಾವಿನಕಾಯಿ seasonal ನಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ರುಚಿಯಾದ ಅಡುಗೆ ಮತ್ತು ಸ್ವೀಟ್ ಗಳನ್ನು ಮಾಡೆ ಮಾಡತಿವಿ.ಇವತ್ತು ನಾನಿಲ್ಲಿ ಹಳ್ಳಿ ಸೊಗಡಿನ ನಮ್ಮ ಹವ್ಯಕ ರೀತಿಯಲ್ಲಿ ತುಂಬಾನೇ easy & instant ಆಗಿ ಮಾವಿನಕಾಯಿ ಖಾರಾ ಸಾಸಿವೆ ಮಾಡೋದನ್ನ ನಿಮ್ಮ ಜೊತೆ share ಮಾಡತಾ ಇದೀನಿ.ಈ ಖಾರಾ ಸಾಸಿವೆಗೆ ಯಾವುದೇ ರೀತಿಯ ಮಾವಿನ ಕಾಯಿ ಇದ್ದರೂ ನಡೆಯುತ್ತೇ ಹಾಗೇನೇ ಇನ್ನೇನು ಊಟಕ್ಕೆ 5 mins ಇದೆ ಅನ್ನುವಾಗಲೂ ಇದನ್ನ ರೆಡಿ ಮಾಡಕೋಬಹುದು ನಿಮಗೆ ಇಷ್ಟ ಆದಲ್ಲಿ ನಮ್ಮ ಚಾನಲ್ ವಿಡಿಯೋ ನೋಡಿ ಬೆಂಬಲ ನೀಡಿ.ಹಾಗೇನೇ ಈ ಅಡುಗೆ ಹೇಗೆ ಮಾಡೋದು ಅನ್ನೋದನ್ನ ಬಹಳ ಸುಲಭವಾಗಿ ತಿಳಿಯಬಹುದು. ಮೊದಲಿಗೆ ಮಾವಿನಕಾಯನ್ನು ತೊಳೆದು ಸಿಪ್ಪೆ ತೆಗೆದು ಕಟ್ ಮಾಡಿಕೊಂಡು (1\2 ಮಾವಿನಕಾಯನ್ನು ಉಪಯೋಗಿಸಿದ್ದು) ಮಿಕ್ಸಿ ಜಾರಿಗೆ ಹಾಕಿ ಅದರ ಜೊತೆಯಲ್ಲೇ 1 ಬಟ್ಟಲು ಹಸಿ ತೆಂಗಿನತುರಿ ಮತ್ತೆ ಖಾರಕ್ಕೆ ತಕ್ಕಷ್ಟು ಹಸಿ ಮೆಣಸು or ಸೂಜಿ ಮೆಣಸು, ನಾನಿಲ್ಲಿ 3-4 ಹಸಿಮೆಣಸು ಹಾಗೂ 1\2 tsp ಹಸಿ ಸಾಸಿವೆನಾ ಹಾಕಬಿಟ್ಟು (fry ಮಾಡೋದೇನೂ ಬೇಡ)
ಮತ್ತು ಅದರ ಜೊತೆಯಲ್ಲಿ 1\4 ಚಮಚ ಅರಿಶಿನ ಪುಡಿ ಸ್ವಲ್ಪಾ ನೀರನ್ನು ಸೇರಿಸಿ ಸ್ವಲ್ಪಾನೇ ತರಿ-ತರಿ ಯಾಗಿ ರುಬ್ಬಿ ಒಂದು ಬಟ್ಟಲಿಗೆ ರುಬ್ಬಿರುವ ಮಿಶ್ರಣವನ್ನು ಸೇರಿಸಿ.ಜೊತೆಯಲ್ಲಿ ಸಪ್ಪೆ or ಹುಳಿ ಇರದ ಗಟ್ಟಿ ಮೊಸರನ್ನು 3-4 ಚಮಚ ಸೇರಿಸಿ (ಮಾವಿನ ಕಾಯಿ ಹುಳಿ ಇರುವದರಿಂದ ಹುಳಿ ಮೊಸರನ್ನು ಹಾಕಬಾರದು) ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಒಂದು ಕಡಾಯಿಗೆ 1 tbsp ಅಡುಗೆ ಎಣ್ಣೆಯನ್ನು ಹಾಕಿ ಎಣ್ಣೆ ಚೆನ್ನಾಗಿ ಕಾದ ನಂತರ 2 ಬ್ಯಾಡಗಿ ಮೆಣಸನ್ನು ಸೇರಿಸಿ ಮೆಣಸು ಚೆನ್ನಾಗಿ crispy ಆದ ನಂತರ 1\2 tsp ಸಾಸಿವೆ ಕಾಳನ್ನು ಸೇರಿಸಿ ಚೆನ್ನಾಗಿ fry ಆದ ನಂತರ ಅಂದರೆ ಸಿಡಿದ ನಂತರ gas off ಮಾಡಿ ಮಾವಿನ ಕಾಯಿ ಸಾಸಿವೆಗೆ add ಮಾಡಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಹಾಗೂ ಅತಿ ಸುಲಭವಾಗಿ ಮಾಡುವ ಮಾವಿನಕಾಯಿ ಖಾರಾ ಸಾಸಿವೆ ಬಿಸಿ-ಬಿಸಿ ಅನ್ನಕ್ಕೆ ಸವಿಯಲು ಸಿದ್ಧ. ನೀವು ಕೂಡ try ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮ್ಮ ಜೊತೆ ಹಂಚಿಕೊಳ್ಳಿ Thank You ಶುಭದಿನ.
ಒಂದು ಮಾವಿನಕಾಯಿ ಇದ್ರೆ ಸಾಕು,ಮನೆಯವರೆಲ್ಲಾ ಇಷ್ಟ ಪಟ್ಟು ತಿಂತಾರೆ.ಮಾವಿನಕಾಯೊ ಖಾರ ಸಾಸಿವೆ ಸೂಪರ್ ರೆಸಿಪಿ ನೋಡಿ

Cook
[irp]