ಜೇಮ್ಸ್ ಗೆ ಎಮೋಷನ್ ಸಾಕು…. RRR ಕಲೆಕ್ಷನ್ ಬೇಕು…!!ನಮ್ಮ ನಿಮ್ಮೆಲ್ಲರ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್ ಕಳೆದ ಒಂದು ವಾರದಿಂದ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೂ, ಸಿನಿಮಾವನ್ನು ಕೈ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಬಾಲಿವುಡ್ ಸಿನಿಮಾ ದಿ ಕಾಶ್ಮೀರ್ ಫೈಲ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ RRR ಗೋಸ್ಕರ ಜೇಮ್ಸ್ ಸಿನಿಮಾವನ್ನು ಎತ್ತಂಗಡಿ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ ಈ ಕಾರಣಕ್ಕೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಜೇಮ್ಸ್ ಪ್ರದರ್ಶಿಸುತ್ತಿರುವ ಥಿಯೇಟರ್ ಹಾಗೂ ಸರ್ಕಾರಕ್ಕೆ ಅಗತ್ಯವಿರುವ ಶೈಲಿಯಲ್ಲಿ ಎಚ್ಚರಿಕೆ ಕೊಡಲಾಗುತ್ತಿದೆ. ಜೇಮ್ಸ್ ಸಿನಿಮಾ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕೆಲವು ಕಡೆ ಎರಡು ಸೆಂಟರ್‌ಗಳಲ್ಲಿ ಬಿಡುಗಡೆ ಮಾಡಿದ್ದೇವೆ ಅಲ್ಲಿ ಒಂದು ಸೆಂಟರ್ ಅನ್ನು ನಾವೇ ಬಿಟ್ಟು ಕೊಡುತ್ತೇವೆ. ಆದರೆ ಎಲ್ಲವೂ ನಮಗೆ ಕೊಡಿ ಅಂದರೆ ಹೇಗೆ ಸಿನಿಮಾದ ಶೇರ್ ಚೆನ್ನಾಗಿ ಬರುತ್ತಿರುವ ಚಿತ್ರಮಂದಿರಗಳೂ ಜೇಮ್ಸ್ ತೆಗೆಯುತ್ತೇವೆ ಎನ್ನುತ್ತಿರುವುದು ಅಭಿಮಾನಿಗಳ ನೋವಿಗೆ ಕಾರಣವಾಗಿದೆ. ಬ್ಯಾನರ್, ಕಟೌಟ್ ಕಾಣದ ಚಿತ್ರಮಂದಿರಗಳೆಲ್ಲ ಈ ಸಿನಿಮಾದಿಂದ ಕಂಡಿವೆ ಅದಕ್ಕೆ
ಅಪ್ಪು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಜೇಮ್ಸ್ ಅತ್ಯದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ತೆಲುಗಿನ RRR ಜೇಮ್ಸ್ ಚಿತ್ರ ಎಲ್ಲೆಲ್ಲಿ ಪ್ರದರ್ಶನ ಕಾಣುತ್ತಿದೆಯೋ ಅಲ್ಲೆಲ್ಲಾ ತೆಗೆದು ಹಾಕಿ ಆ ಚಿತ್ರವನ್ನು ಬಿಡುಗಡೆ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದಾರೆ.ಯಾವುದೇ ಕಾರಣಕ್ಕೂ ಎಲ್ಲಿಯೂ ಜೇಮ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆಯೋ ಅಲ್ಲಿ RRR ಆಗಲಿ, ದಿ ಕಾಶ್ಮೀರ್ ಫೈಲ್ಸ್ ಆಗಲಿ ಬಿಡುಗಡೆ ಆಗದಂತೆ ವಿನಂತಿ ಮಾಡುತ್ತೇವೆ ಅಪ್ಪು ಅಭಿಮಾನಿಗಳು. ಯಾವುದೋ ಪರಭಾಷಾ ಚಿತ್ರಕ್ಕೋಸ್ಕರ ಜೇಮ್ಸ್ ಸಿನಿಮಾ ಮತ್ತು ಜೇಮ್ಸ್ ಚಿತ್ರತಂಡವನ್ನು ಕೊಲ್ಲುತ್ತಿದ್ದಾರೆ ಈ ಬಿಜೆಪಿ ಸರ್ಕಾರದವರು ಮುಂಚೆನೂ ಇದೇ ರೀತಿ ಮಾಡಿದರು. ಈ ಜೇಮ್ಸ್ ಗೂ ಹಾಗೆಯೇ ಇದೆ ಮುಂಚೆ ಒಬ್ಬ ಮನುಷ್ಯನ ಜೊತೆ ಆಡಿದರು ಈಗ ಒಬ್ಬ ಮನುಷ್ಯನ ಜೊತೆ ಆಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ. ಹೋದರು ಸಿನಿಮಾ ಹೌಸ್ ಎಲ್ಲಿಫುಲ್ ಬೋರ್ಡ್ ಕಾಣಿಸುತ್ತಿದೆ. ಇಂತಹ ಸಮಯದಲ್ಲಿ ತೆಗೆದರೆ ಸರಿ ಇರಲ್ಲ ಎಂದು ಅಪ್ಪು ಅಭಿಮಾನಿ ವಾರ್ನಿಂಗ್ ಕೊಟ್ಟಿದ್ದಾರೆ.
ಜೇಮ್ಸ್ ಸಿನಿಮಾಕ್ಕೆ ಯಮೋಷನ್ ಸಾಕು, ಆರ್ ಆರ್ ಗೆ ಕಲೆಕ್ಷನ್ ಬೇಕು..ಏನ್ ಗುರು ಇದು ಅದೇ ರಾಗ ಅದೇ ಹಾಡು

Fimy news
[irp]