ಮನೆಯಲ್ಲಿ ಸದಾ ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ರಮಣ ಶ್ರೀ ಅವರು ಹೇಳಿದ ಈ ಮಾತು ನೆನಪಿಡಿ.. - Karnataka's Best News Portal

ಮನೆಯಲ್ಲಿ ಸದಾ ಕಿರಿಕಿರಿಯನ್ನು ಭಾವಿಸುತ್ತಿದ್ದರೆ ಇದನ್ನು ತಿಳಿದುಕೊಳ್ಳಿ||ಮಾತುಮಾತಿಗೂ ಮನೆಯಲ್ಲಿ ಕಿರಿಕಿರಿ ಇದ್ದರೆ ರಮಣ ಮಹರ್ಷಿಗಳು ಹೇಳಿದ ಈ ಮಾತು ನೆನಪಿಡಿ ಒಂದು ಸಾರಿ ರಾಜ ವಿಕ್ರಮಾದಿತ್ಯ ತನ್ನ ಸೇವಕ ಮತ್ತು ಮಂತ್ರಿಗಳ ಜೊತೆ ಸೇರಿ ಬೇಟೆಯಾಡಲು ಕಾಡಿಗೆ ಹೋದರು ಬೇಟೆಯಾಡುತ್ತಾ ಬೇಟೆಯಾಡುತ್ತಾ ಒಬ್ಬರಿಂದ ಒಬ್ಬರು ದೂರವಾದರೂ ಕಾಡಿನ ಒಂದು ಪ್ರದೇಶದಲ್ಲಿ ಮರಗಳ ಕೆಳಗೆ ಒಬ್ಬ ವೃದ್ಧ ಹಾಗೂ ಅಂಧ ಸಾಧು ಕುಳಿತಿರುವುದನ್ನು ಕಂಡ ವಿಕ್ರಮಾ ದಿತ್ಯನು ಸಾಧು ಮಹಾರಾಜರೇ ಈ ದಾರಿಯಲ್ಲಿ ಇದಕ್ಕಿಂತ ಮೊದಲು ಯಾರಾದರೂ ಹೋದರೆ ಎಂದು ಕೇಳುತ್ತಾನೆ ಆಗ ಆ ಅಂಧ ಸಾಧು ಮಹಾರಾಜ ಎಲ್ಲರಿಗಿಂತ ಮೊದಲು ನಿಮ್ಮ ಸೇವಕ ಹೋದನು ಅವನ ಹಿಂದೆ ನಿಮ್ಮ ಸೇನಾಧಿಪತಿ ಹೋದನು ಸೇನಾಧಿಪತಿಯ ನಂತರ ನಿಮ್ಮ ಮಂತ್ರಿ ಕೂಡ ಇದಕ್ಕಿಂತ ಮೊದಲೇ ಹೋದನು ಎಂದು ಹೇಳಿದರು.

ಅಂಧರಾಗಿ ಕಣ್ಣು ಕಾಣಿಸದೆ ಇರುವ ಆ ಸಾಧು ಹೇಳಿದ ಮಾತುಗಳನ್ನು ಕೇಳಿದ ಮಹಾರಾಜ ಆಶ್ಚರ್ಯದಿಂದ ಹಾಗೂ ಆಸಕ್ತಿಯಿಂದ ಈ ರೀತಿ ಕೇಳಿದನು ನಿಮಗೆ ಕಣ್ಣುಗಳು ಕಾಣಿಸುವುದಿಲ್ಲ ಅಲ್ಲವೇ ಹಾಗಿದ್ದರೂ ಕೂಡ ನಮ್ಮ ಸೇವಕ ಸೇನಾಧಿಪತಿ ಹಾಗೂ ಮಂತ್ರಿಗಳು ಈಗ ಇದೇ ದಾರಿಯಲ್ಲಿ ಈಗಷ್ಟೇ ಹೋದರು ಎಂದು ಹೇಗೆ ಗ್ರಹಿಸಿದಿರಿ ನಾನು ರಾಜ ಎಂದು ಹೇಗೆ ಕಂಡುಹಿಡಿದಿರಿ ಎಂದು ಪ್ರಶ್ನೆ ಕೇಳಿದನು ಆಗ ಅಂಧ ಸಾಧು ನಗುತ್ತಾ ಮಹಾರಾಜ ನಾನು ಆ ಮೂವರನ್ನು ಮತ್ತು ನಿಮ್ಮನ್ನು ನಿಮ್ಮ ಮಾತುಗಳನ್ನು ಕೇಳಿ ಕಂಡುಹಿಡಿದೆ ಎಲ್ಲರಿಗಿಂತ ಮೊದಲು ನಿಮ್ಮ ಸೇವಕ ಬಂದು ಏನಯ್ಯ ಈ ಕಡೆ ಯಾರಾದರೂ ಬಂದರ ಎಂದು ಕೇಳಿದನು ನಂತರ ನಿಮ್ಮ ಸೇನಾಧಿ ಪತಿ ಬಂದು ಹೇ ಸಾಧು ಈ ಕಡೆ ಯಾರಾದರೂ ಹೋದರೆ ಎಂದು ಕೇಳಿದನು.

ನಂತರ ನಿಮ್ಮ ಮಂತ್ರಿ ಬಂದು ಸಾಧುಗಳೇ ಈ ಕಡೆ ಯಿಂದ ಯಾರಾದರೂ ಹೋದರೆ ಎಂದು ಕೇಳಿದನು ಬಳಿಕ ನೀವು ಬಂದು ಸಾಧು ಮಹಾರಾಜರೇ ಇದಕ್ಕಿಂತ ಮೊದಲು ಈ ಕಡೆ ಇನ್ಯಾರಾದರೂ ಹೋದರೆ ಎಂದು ಕೇಳಿದಿರಿ ಮಹಾರಾಜ ಒಬ್ಬ ವ್ಯಕ್ತಿ ಮಾತನಾಡುವ ಶೈಲಿಯಿಂದ ಆತನ ಪ್ರತಿಷ್ಠೆ ಮತ್ತು ಪದವಿ ಏನು ಎಂದು ಅರ್ಥ ಮಾಡಿಕೊಳ್ಳಬಹುದು ಎಂದು ಉತ್ತರ ನೀಡಿದರು. ಹಾಗಾಗಿ ಮನುಷ್ಯನ ಬೆಲೆಯನ್ನು ಆತನ ಮಾತು ತಿಳಿಸುತ್ತದೆ ಎನ್ನುವುದು ಇದಕ್ಕೆ ಅನ್ನಿಸುತ್ತದೆ ಅಲ್ಲವೆ. ಜೀವನದಲ್ಲಿ ನಾವು ಸಂಗಾತಿಯೊಂದಿಗೆ ಹೇಗೆ ಸಂವಹನ ನಡೆಸುತ್ತಿದ್ದೇವೆ ಎಂಬುದರ ಮೇಲೆ ಸಂಬಂಧ ನಿಂತಿರುತ್ತದೆ ನಾವು ಬಳಸುವ ಪದಗಳು ನಾವು ತೋರಿಸುವ ಸನ್ನೆಗಳು ಮತ್ತು ನಮ್ಮ ಸಂಗಾತಿ ಯೊಂದಿಗೆ ನಾವು ಮಾತನಾಡುವ ರೀತಿ ಸಂಬಂಧದಲ್ಲಿ ಮುಖ್ಯವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *