ನೇಲ್ ಪಾಲಿಷ್ ನಿಂದ ನರಹುಲಿ ಯನ್ನು ಬುಡದಿಂದ ಕಿತ್ತು ಹಾಕಿ ಕಲೆ ಕೂಡ ಉಳಿಯೊಲ್ಲ... - Karnataka's Best News Portal

ನೇಲ್ ಪಾಲಿಷ್ ನಿಂದ ನರಹುಲಿ ಯನ್ನು ಬುಡದಿಂದ ಕಿತ್ತು ಹಾಕಿ ಕಲೆ ಕೂಡ ಉಳಿಯೊಲ್ಲ…

ನೇಲ್ ಪಾಲಿಶ್ ನಿಂದ ನರ ಹುಲಿಯನ್ನು ಬುಡದಿಂದ ಕಿತ್ತುಹಾಕಿ…! ಕಲೆ ಕೂಡ ಉಳಿಯುವುದಿಲ್ಲ….||

ಕೆಲವೊಬ್ಬರಿಗೆ ಚರ್ಮದ ಮೇಲೆ ಒಂದು ರೀತಿಯ ಗುಳ್ಳೆಗಳು ಕಾಣಿಸಿ ಕೊಳ್ಳುತ್ತದೆ. ಆನಂತರ ಅದು ದಿನೇ ದಿನೇ ಕಳೆಯುತ್ತಾ ಹೋದಂತೆ ಗಂಟುಗಳು ಆಗುತ್ತದೆ ಇದನ್ನು ನರ ಹುಲಿ ಎಂದು ಕರೆಯುತ್ತಾರೆ. ಇದು ಮುಖದ ಮೇಲೆ, ಕುತ್ತಿಗೆಯ ಮೇಲೆ, ಮೂಗಿನ ಮೇಲೆ, ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದು ನಿಮ್ಮ ದೇಹದಲ್ಲಿ ಉಂಟಾಗುವಂತಹ ಬ್ಯಾಕ್ಟೀರಿಯಗಳ ಸಂಗ್ರಹಣೆ ಯಿಂದಾಗಿ ಕಾಣಿಸಿಕೊಳ್ಳುವಂತಹ ಸಮಸ್ಯೆ ಎಂದು ಹೇಳಬಹುದು.

ಇದು ಹೆಚ್ಚಾಗಿ ಅಷ್ಟೇನೂ ತೊಂದರೆಯನ್ನು ಉಂಟು ಮಾಡದೆ ಇದ್ದರೂ ಇದು ನಿಮಗೆ ಹಲವಾರು ರೀತಿಯ ತೊಂದರೆಯನ್ನು ಉಂಟುಮಾಡು ತ್ತದೆ ಅದರಲ್ಲೂ ನಿಮ್ಮ ಸೌಂದರ್ಯವನ್ನು ಹಾಳು ಮಾಡುವಂತಹ ಕೆಲಸವನ್ನು ಇದು ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಬಂದರೆ ಅವರಂತೂ ಇದನ್ನು ಹೋಗಲಾಡಿಸಿಕೊಳ್ಳುವುದು ಹೇಗೆ ಎಂಬ ಆಲೋಚನೆಯಲ್ಲಿಯೇ ಇರುತ್ತಾರೆ.


ಅದರಲ್ಲೂ ಕೆಲವೊಬ್ಬರು ಇದನ್ನು ಕೀಳುವ, ಕತ್ತರಿಸುವಂತಹ ಹಾಗೂ ಇನ್ನು ಕೆಲವೊಬ್ಬರು ಇದನ್ನು ಸುಡುವ ವಿಧಾನದಿಂದಲೂ ಇದನ್ನು ದೂರ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇವೆಲ್ಲವೂ ಕೆಲವೊಮ್ಮೆ ಅಪಾಯಕಾರಿ ಯಾಗುತ್ತದೆ ಎಂದೇ ಹೇಳಬಹುದು. ಹಾಗೂ ಆ ಸಮಸ್ಯೆಗಳು ನಿಮಗೆ ಬುಡ ಸಮೇತ ಅಂದರೆ ಸಂಪೂರ್ಣವಾಗಿ ದೂರವಾಗುವುದಿಲ್ಲ ಬದಲಿಗೆ ಕೆಲವೊಂದು ಗುರುತುಗಳು ಇದ್ದೇ ಇರುತ್ತದೆ.

See also  ನಿಮ್ಮೆಲ್ಲಾ ಥೈರಾಯ್ಡ್ ಮಂಡಿ ನೋವು ಗಂಟು ನೋವು ಕತ್ತು ನೋವು,ಕ್ಯಾನ್ಸರ್ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತೆ....

ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ನೀವು ಮಾಡಿದ್ದೆ ಆದಲ್ಲಿ ನಿಮಗೆ ಇದು ಬುಡ ಸಮೇತ ದೂರವಾಗುತ್ತದೆ. ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗದೆ ಈ ಒಂದು ಸಮಸ್ಯೆಯನ್ನು ನೀವು ದೂರ ಮಾಡಿಕೊಳ್ಳಬಹುದು. ಹಾಗಾದರೆ ಈ ಮನೆಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಇದನ್ನು ಹೇಗೆ ಮಾಡುವುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯ ವಿಧಾನ ಯಾವುದು ಎಂದರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸೀಮೆ ಸುಣ್ಣ ಇದ್ದೇ ಇರುತ್ತದೆ. ಇದನ್ನು ಪುಡಿ ಮಾಡಿಟ್ಟು ಕೊಂಡು ಇದನ್ನು ನಿಮಗೆ ಯಾವ ಜಾಗದಲ್ಲಿ ನರಹುಲಿ ಆಗಿರುತ್ತದೆ ಯೋ ಅಲ್ಲಿಗೆ ಇದನ್ನು ಹಾಕಿ ಅದು ಆಚೆ ಈಚೆ ಹೋಗದಂತೆ ಪ್ಲಾಸ್ಟರ್ ಹಾಕಬೇಕು ನಂತರ ಒಂದು ದಿನ ಬಿಟ್ಟು ಇದನ್ನು ತೆಗೆಯಬೇಕು ಈ ರೀತಿ ಮಾಡುವುದರಿಂದ ನರಹುಲಿ ಸಮಸ್ಯೆ ದೂರವಾಗುತ್ತದೆ.

ಇನ್ನು ಎರಡನೆಯ ವಿಧಾನ ಇದನ್ನು ಮಾಡುವುದಕ್ಕೆ ನೈಲ್ ಪಾಲಿಶ್ ಬೇಕಾಗುತ್ತದೆ. ನರ ಹುಲಿ ಆಗಿರುವಂತಹ ಜಾಗಕ್ಕೆ ಸಂಪೂರ್ಣವಾಗಿ 15 ದಿನಗಳ ಕಾಲ ನೈಲ್ ಪಾಲಿಶ್ ಹಚ್ಚುತ್ತಾ ಬರಬೇಕು ಈ ರೀತಿ ಮಾಡುವುದರಿಂದ ನಿಮ್ಮ ನರ ಹುಲಿ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.crossorigin="anonymous">