ಮಹಿಳೆಯರ ಜೈಲು ಜೀವನ ಪವಿತ್ರ ಗೌಡ ಇಲ್ಲಿ ಹೇಗಿದ್ದಾರೆ.ಜೈಲಿನಲ್ಲಿ ಗರ್ಭಿಣಿಯರ ಪಾಡು ಹೇಗಿದೆ..ನೋಡಿ

ಮಹಿಳೆಯರ ಜೈಲು ಜೀವನ ಪವಿತ್ರ ಗೌಡ ಇಲ್ಲಿ ಹೇಗಿದ್ದಾರೆ.ಜೈಲಿನಲ್ಲಿ ಗರ್ಭಿಣಿಯರ ಪಾಡು ಹೇಗಿದೆ..ನೋಡಿ

WhatsApp Group Join Now
Telegram Group Join Now

ಹಾಯ್ ಫ್ರೆಂಡ್ಸ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹಿಳಾ ಕೈದಿಗಳು ಎಷ್ಟಿದ್ದಾರೆ ಪವಿತ್ರ ಗೌಡ ಸೇರಿದಂತೆ ಮಹಿಳಾ ಕೈದಿಗಳ ಪರಿಸ್ಥಿತಿ ಹೇಗಿದೆ ಜೈಲಿನಲ್ಲಿ ಗರ್ಭಿಣಿ ಮಹಿಳೆಯರ ಪಾಡು ಹೇಗಿದೆ.

ಜೈಲಿನೊಳಗೆ ವಾರ್ಡನ್ ಗಳು ಮಾಂಸದಂದೆ ನಡೆಸಿದ್ರ ಊಟಕ್ಕೆ ಏನು ಕೊಡ್ತಾರೆ ಪುರುಷರಿಂದ ಹೇಗೆ ಅಂತರ ಕಾಪಾಡುತ್ತಾರೆ ಎಲ್ಲವನ್ನು ಈ ವಿಡಿಯೋದಲ್ಲಿ ಹೇಳ್ತೀವಿ.

ಪರಪ್ಪನ ಅಗ್ರಹಾರದಲ್ಲಿ ಮಹಿಳಾ ಕೈದಿಗಳು ಪರಪ್ಪನ ಅಗ್ರಹಾರ ಜೈಲನ್ನು 2000 ನೇ ಇಸವಿಯಲ್ಲಿ ನಿರ್ಮಿಸಲಾಯಿತು ಈ ಜೈಲು ಕಟ್ಟುವಾಗ ಪುರುಷ ಕೈದಿಗಳಿಗೆ ಅನುಗುಣವಾಗಿ ನಿರ್ಮಿಸಲಾಗಿತ್ತು.

ಮಹಿಳಾ ಕೈದಿಗಳ ಅಗತ್ಯತೆಗಳನ್ನ ಗಮನಕ್ಕೆ ತಗೊಂಡಿರಲಿಲ್ಲ ಆದ್ರೀಗ ಅನಿವಾರ್ಯವಾಗಿ ಇಲ್ಲಿಗೆ ಮಹಿಳಾ ಕೈದಿಗಳು ಗಳನ್ನು ಕೂಡ ಶಿಕ್ಷೆಗೆ ಕಳುಹಿಸಲಾಗುತ್ತೆ ಈ ಜೈಲಿನಲ್ಲಿ 5000ಕ್ಕೂ ಹೆಚ್ಚು ಕೈದಿಗಳಿದ್ದು ಅವರ ಪೈಕಿ 200ಕ್ಕೂ ಹೆಚ್ಚು ಮಹಿಳಾ ಕೈದಿಗಳಿದ್ದಾರೆ.

ಸದ್ಯ ಪವಿತ್ರ ಗೌಡ ಕೂಡ ಇಲ್ಲೇ ಇದ್ದು ಆಕೆಗೆ ವಿಚಾರಣಾಧೀನ ಕೈದಿ 6024 ನಂಬರ್ ನೀಡಲಾಗಿದೆ ಒಂದು ಬ್ಯಾರಕ್ ನಲ್ಲಿ 20ಕ್ಕೂ ಹೆಚ್ಚು ಜನ ಮಹಿಳಾ ಕೈದಿಗಳಿಗೆ ಅಂತಲೇ ಒಂದಷ್ಟು ಬ್ಯಾರಕ್ ಗಳು ಮೀಸಲಿವೆ.

ಅಲ್ಲಿ ಒಂದೊಂದು ಬ್ಯಾರಕ್ ನಲ್ಲಿ 20 ಮಹಿಳಾ ಕೈದಿಗಳನ್ನು ತುಂಬಲಾಗುತ್ತೆ ಆದರೆ ಪವಿತ್ರ ಗೌಡರನ್ನ ಮಹಿಳಾ ವಿಭಾಗದ ಡಿ ಬ್ಯಾರಕ್ ಗೆ ಹಾಕಲಾಗಿದೆ ಅಲ್ಲಿ ಬ್ಯಾರಕ್ ಒಳಗೂ ರೂಮುಗಳಿದ್ದು ಒಂದು ರೂಮಿನಲ್ಲಿ ಇಬ್ಬಿಬ್ಬರು ಕೈದಿಗಳು ಇರ್ತಾರೆ ಅಂದ್ರೆ ಪವಿತ್ರ ಗೌಡ ಜೊತೆಗೆ ಒಬ್ಬರು ಕೈದಿ ಇರ್ತಾರೆ.

ಇನ್ನು ಪುರುಷ ಕೈದಿಗಳು ಊಟಕ್ಕೆ ಸ್ನಾನಕ್ಕೆ ಹೋಗುವಾಗೆಲ್ಲ ಹೊರಗೆ ಓಡಾಡಿಕೊಂಡಿರಲು ಅವಕಾಶವಿದೆ ಆದರೆ ಮಹಿಳಾ ಕೈದಿಗಳನ್ನು ಬ್ಯಾರೆಕ್ಟ್ ನಿಂದ ಹೊರಗೆ ಬಿಡೋದಿಲ್ಲ ಅವರನ್ನು ನೋಡಿಕೊಳ್ಳಲು ಮಹಿಳಾ ವಾರ್ಡನ್ ಗಳು ಇರ್ತಾರೆ.

ಪುರುಷ ಕೈದಿಗಳ ಮುಖ ನೋಡೋಕೆ ಮಾತನಾಡೋಕೆ ಅವಕಾಶ ಇರೋದಿಲ್ಲ ಪುರುಷ ಕೈದಿಗಳೇ ಅಡುಗೆ ಮಾಡ್ತಾರೆ ಜೊತೆಗೆ ಜೈಲಿನ ಅಂಗಳದಲ್ಲಿ ನಿಂತು ಕೈದಿಗಳಿಗೆ ಊಟ ಬಡಿಸಲಾಗುತ್ತೆ.

ಎಲ್ಲಾ ಕೈದಿಗಳು ಹೋಗಿ ಲೈನಿನಲ್ಲಿ ನಿಂತು ಊಟ ತಗೋತಾರೆ ಆದರೆ ಮಹಿಳಾ ಕೈದಿಗಳು ಆ ಜಾಗಕ್ಕೆ ಬಂದು ಊಟ ತಗೊಳ್ಳೋ ಹಾಗಿಲ್ಲ ಬದಲಾಗಿ ಪುರುಷ ಕೈದಿಗಳು ಮಹಿಳಾ ಕೈದಿಗಳ ಬ್ಯಾರಕ್ ಇರೋ ಜಾಗಕ್ಕೆ ಊಟ ತಗೊಂಡು ಹೋಗ್ತಾರೆ.

ಆಗ ಮಹಿಳಾ ಕೈದಿಗಳು ಬ್ಯಾರಕ್ ನಿಂದ ಹೊರಬಂದು ಊಟ ಹಾಕಿಸಿಕೊಂಡು ವಾಪಸ್ ಒಳಗೆ ಹೋಗ್ಬೇಕು ತಲೆಯೆತ್ತಿ ನೋಡಿದ್ರು ವಾರ್ಡನ್ ಗಳು ಬಾಯಿಗೆ ಬಂದಂತೆ ಬೈತಾರೆ ಅಂತ ಜೈಲಿನಲ್ಲಿದ್ದು ಬಂದ ಕೈದಿಗಳು ಹೇಳ್ಕೊಂಡಿದ್ದಾರೆ.

ಬಟ್ಟೆ ಸ್ಯಾನಿಟರಿ ನ್ಯಾಪ್ಕಿನ್ ಕೊಡೋದಿಲ್ಲ ಜೈಲಿನಲ್ಲಿ ದೊಡ್ಡ ಮಟ್ಟದಲ್ಲಿ ಸ್ವಚ್ಛತೆಯ ಕೊರತೆ ಇದೆ ಮಹಿಳೆಯರಿಗೆ ಮೂರು ಸೀರೆ ಕೊಡಬೇಕು ಸ್ಯಾನಿಟರಿ ನ್ಯಾಪ್ಕಿನ್ ಕೊಡಬೇಕು ಅನ್ನೋ ರೂಲ್ಸ್ ಇವೆ.

ಆದರೂ ವಾರ್ಡನ್ ಗಳು ಮಹಿಳಾ ಕೈದಿಗಳಿಗೆ ಯಾವುದನ್ನು ಕೊಡೋದಿಲ್ಲ ಸತಾಯಿಸುತ್ತಾರೆ ಅಂತ ಮಾಜಿ ಕೈದಿಗಳು ಜೈಲಿನ ಕರಾಳತೆ ಬಿಚ್ಚಿಟ್ಟಿದ್ದಾರೆ ಅದು ಅಲ್ಲದೆ ಒಂದು ಬ್ಯಾರೆಕ್ಟ್ ನಲ್ಲಿ ಎರಡು ಟಾಯ್ಲೆಟ್ ಇರುತ್ತೆ.

ಅದನ್ನೇ 20 ಜನ ಬಳಸುವುದರಿಂದ ಸ್ವಚ್ಛತೆ ಕೂಡ ಇರೋದಿಲ್ಲ ಇನ್ನು ಬಟ್ಟೆಯನ್ನು ಮನೆಯಿಂದ ತರಿಸಿಕೊಳ್ಳಲು ಅವಕಾಶ ಇರುತ್ತೆ ಪವಿತ್ರ ಗೌಡ ಕೂಡ ಮನೆಯಿಂದಲೇ ಬಟ್ಟೆ ಮತ್ತು ಕೆಲ ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದಾರೆ ಗರ್ಭಿಣಿ ಮಹಿಳೆಯರಿಗೆ ಕೇರ್ ಇಲ್ಲ.

ನಾರ್ಮಲ್ ಮಹಿಳೆಯರು ಬಿಡಿ ಗರ್ಭಿಣಿಯಾಗಿರೋ ಕೈದಿಗಳಿಗೂ ಸರಿಯಾದ ಸೌಲಭ್ಯ ಸಿಗೋದಿಲ್ಲ ಮಗುವಿನ ಬೆಳವಣಿಗೆಗೆ ಬೇಕಾದ ಆಹಾರ ಸಿಗೋದಿಲ್ಲ ಒಂದು ಬೆಡ್ ಶೀಟ್ ಮತ್ತು ಒಂದು ದಿಂಬು ನೀಡಲಾಗುತ್ತೆ.

ನೆಲದ ಮೇಲೆ ಮಲಗೋದ್ರಿಂದ ಗರ್ಭಿಣಿಯರಿಗೆ ತುಂಬಾ ಕಷ್ಟವಾಗುತ್ತೆ ಎಂಟು ತಿಂಗಳು ಆಗೋವರೆಗೆ ಗರ್ಭ ನಿಂತರೆ ಅಂತವರಿಗೆ ಮಾತ್ರ ಜೈಲಿನ ಆಸ್ಪತ್ರೆಯಲ್ಲಿರೋ ಬೆಡ್ ಮತ್ತು ಕಾಟ್ ನೀಡಲಾಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]