ಬ್ರಹ್ಮಗಂಟು ಸೀರಿಯಲ್ ದೀಪಾ ನಿಜವಾದ ವಯಸ್ಸು ಫ್ಯಾಮಿಲಿ ಯಾವೆಲ್ಲಾ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಮೊದಲು ನೋಡಿ

ಬ್ರಹ್ಮಗಂಟು ಸೀರಿಯಲ್ ದೀಪಾ ನಿಜವಾದ ವಯಸ್ಸು ಫ್ಯಾಮಿಲಿ ಯಾವೆಲ್ಲಾ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಮೊದಲು ನೋಡಿ

WhatsApp Group Join Now
Telegram Group Join Now

ಜೀ ಕನ್ನಡದಲ್ಲಿ ಹೊಸದಾಗಿ ಶುರುವಾಗಿರುವಂತಹ ಬ್ರಹ್ಮಗಂಟು ಅನ್ನುವಂತಹ ಸೀರಿಯಲ್ನಲ್ಲಿ ಅಕ್ಕನಿಗಾಗಿ ಸರ್ವಸ್ವವನ್ನು ಕೂಡ ತ್ಯಾಗ ಮಾಡಲು ಮುಂದಾಗಿರುವಂತಹ ಕರುಣಾಮಯಿ ತಂಗಿಯ ಒಂದು ಪಾತ್ರ ಅಂತ ಹೇಳಿದ್ರೆ ಅದುವೇ ದೀಪ ಅನ್ನುವಂತಹ ಪಾತ್ರ.

ಈ ಪಾತ್ರವನ್ನು ನಿರ್ವಹಿಸುತ್ತಿರುವಂತಹ ನಟಿಯ ಬಗ್ಗೆ ಸಾಕಷ್ಟು ಮಾಹಿತಿಗಳನ್ನ ನೋಡುವುದಾದರೆ ಅವರ ಹುಟ್ಟಿದ ದಿನಾಂಕ ವಯಸ್ಸು ಅವರ ತಂದೆ ತಾಯಿ ಅವರ ಸಿನಿಮಾಗಳು ಅವರ ಸೀರಿಯಲ್ ಗಳು ಅವರ ವಿದ್ಯಾರ್ಹತೆಯ ಬಗ್ಗೆ ತಿಳಿದುಕೊಳೋಣ.

ಕರುಣಾಮಯಿ ತಂಗಿಯ ಪಾತ್ರವಾಗಿರುವಂತಹ ದೀಪ ಪಾತ್ರವನ್ನು ನಿರ್ವಹಿಸುತ್ತಿರುವಂತಹ ನಟಿಯ ನಿಜವಾದ ಹೆಸರು ದಿಯಾ ಅನ್ನೋದು ಇವರ ಪೂರ್ತಿ ಹೆಸರೇನು ಅಂತ ನೀವು ನೋಡೋದಾದ್ರೆ ದಿಯಾ ಪಾಲಕ್ಕಲ್ ಅನ್ನೋದು ಇವರ ಪೂರ್ತಿ ಹೆಸರಾಗಿದೆ.

ಇವರ ತಂದೆಯ ಹೆಸರು ಅಜಯ್ ಕೃಷ್ಣ ಅನ್ನೋದು ಇವಾಗ ನೀವು ಸ್ಕ್ರೀನಲ್ಲಿ ನೋಡ್ತಾ ಇರೋದು ಅಜಯ್ ಕೃಷ್ಣ ಅವರ ಕೆಲವೊಂದಿಷ್ಟು ಫೋಟೋಸ್ ಗಳು ಅಂದ್ರೆ ದಿಯಾ ಪಾಲಕ್ಕಲ್ ಅವರ ತಂದೆಯ ಕೆಲವೊಂದಿಷ್ಟು ಫೋಟೋಸ್ ಗಳಾಗಿದ್ದಾವೆ.

ಇನ್ನು ದಿಯಾ ಪಾಲಕಲ್ ಅವರ ತಾಯಿಯ ಹೆಸರು ರಮ್ಯ ಅಜಯ್ ಅನ್ನೋದಾಗಿದೆ ಮತ್ತು ಇವಾಗ ನೀವು ಸ್ಕ್ರೀನ್ ನಲ್ಲಿ ನೋಡ್ತಾ ಇರೋದು ರಮ್ಯ ಅಜಯ್ ಅವರ ಕೆಲವೊಂದಿಷ್ಟು ಫೋಟೋಸ್ ಗಳು ದಿಯಾ ಪಾಲಕಲ್ ಮೂಲತಹ ಬೆಂಗಳೂರಿನವರು.

ದಿಯಾ ಪಾಲಕಲ್ ಅವರ ತಾಯಿಯಾಗಿರುವಂತಹ ರಮ್ಯ ಅಜಯ್ ಅವರು ಕಿರುತೆರೆ ಕಲಾವಿದೆ ಕೂಡ ಆಗಿದ್ದರು ಹಾಗೇನೇ ಕ್ಲಾಸಿಕಲ್ ಡಾನ್ಸರ್ ಕೂಡ ಹೌದು ಅಂದ್ರೆ ಭರತನಾಟ್ಯ ಕಲಾವಿದೆ ಕೂಡ ಆಗಿದ್ರು.

ಇದಷ್ಟೇ ಅಲ್ಲದೇನೆ ಡೈರೆಕ್ಟರ್ ಆಫ್ ಮಹಾತ್ಮ ಗಾಂಧಿ ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ಕಾರ್ಪೊರೇಷನ್ ಕೂಡ ಆಗಿದ್ದಾರೆ ಇನ್ನು ದಿಯಾ ಪಾಲಕಲ್ ಅವರ ಚಿಕ್ಕಮ್ಮ ಆಗಿರುವಂತಹ ರಾಧಾ ಅವರು ಕೂಡ ಭರತನಾಟ್ಯ ಕಲಾವಿದೆ ಆಗಿದ್ದು.

ಸಹಜವಾಗಿನೇ ಮನೆನಲ್ಲಿ ಈ ಒಂದು ವಾತಾವರಣ ಇರೋದ್ರಿಂದ ದಿಯಾ ಅವರಿಗೂ ಕೂಡ ನಾಟ್ಯದಲ್ಲಿ ಸಾಕಷ್ಟು ಇಂಟರೆಸ್ಟ್ ಇದೆ ಜೊತೆಗೆ ನಟನೆಯಲ್ಲೂ ಕೂಡ ಸಾಕಷ್ಟು ಅಭಿರುಚಿಯನ್ನ ಹೊಂದಿದ್ದಾರೆ.

ಹೀಗಾಗಿನೇ ಇವರು ಮೊದಲು ರಂಗಭೂಮಿಯಲ್ಲಿ ಪ್ರವೇಶವನ್ನ ಪಡೆದುಕೊಳ್ಳುತ್ತಾರೆ ಹಾಗೇನೇ ರಂಗಭೂಮಿನಲ್ಲಿ ಸಾಕಷ್ಟು ಅನುಭವವನ್ನ ಪಡೆದುಕೊಂಡ ನಂತರ ಸೀರಿಯಲ್ ಗೆ ಎಂಟ್ರಿನ ಕೊಡುತ್ತಾರೆ.

ಸೀರಿಯಲ್ ಬಗ್ಗೆ ಮಾತಾಡೋಣ ಅದಕ್ಕೂ ಮೊದಲು ದಿಯಾ ಅವರ ಎಜುಕೇಶನ್ ಬಗ್ಗೆ ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳೋಣ ದಿಯಾ ಪಾಲಕಲ್ ಅವರು ಸ್ಟಡಿ ಮಾಡಿದ್ದು ಬೆಂಗಳೂರಿನ ನಮಿಸ್ ಎಜುಕೇಶನ್ ಸೆಂಟರ್ನಲ್ಲಿ.

ಹಾಗಾದರೆ ಇವರು ಏನು ಕ್ವಾಲಿಫಿಕೇಶನ್ ಅನ್ನ ಕಂಪ್ಲೀಟ್ ಮಾಡಿಕೊಂಡಿದ್ದಾರೆ ಅಂತ ನೀವು ಕೇಳೋದಾದ್ರೆ ಅಟ್ ಪ್ರೆಸೆಂಟ್ ಅಲ್ಲಿ ಅವರು ತಮ್ಮ ಸೆಕೆಂಡ್ ಪಿಯುಸಿ ಯನ್ನ ಕಂಪ್ಲೀಟ್ ಮಾಡಿಕೊಂಡಿದ್ದಾರೆ.

ಈಗ ಇವರ ನಟನ ಬದುಕಿನ ಬಗ್ಗೆ ಮಾತಾಡಬೇಕು ಅಂತ ಹೇಳಿದ್ರೆ ದಿಯಾ ಪಾಲಕಲ್ ಅವರಿಗೆ ನಟನೆಯಲ್ಲಿ ಅಷ್ಟೇ ಅಲ್ಲದೇನೆ ತನ್ನ ತಾಯಿಯಂತೆ ಭರತನಾಟ್ಯದಲ್ಲೂ ಕೂಡ ಸಾಕಷ್ಟು ಆಸಕ್ತಿ ಇದೆ.

ಹೀಗಾಗಿನೇ ದಿಯಾ ಅವರು ಭರತನಾಟ್ಯದ ಕಾಸ್ಟ್ಯೂಮ್ ಅಲ್ಲಿ ತುಂಬಾ ಸಲ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೇನೆ ಈಗಾಗಲೇ ನಾನು ನಿಮಗೆ ತಿಳಿಸಿದಂತೆ ರಂಗಭೂಮಿಯ ಅನುಭವವನ್ನ ಪಡೆದು.

ನಂತರ ಸೀರಿಯಲ್ ಗೆ ಬಾಲನಟಿಯಾಗಿ ಎಂಟ್ರಿಯನ್ನು ಕೂಡ ಪಡ್ಕೊಂಡಿದ್ದರು ಆಗಿನ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಾ ಇದ್ದಂತಹ ಕಿನ್ನರಿ ಅನ್ನುವಂತಹ ಸೀರಿಯಲ್ 2015 ರಲ್ಲಿ ಪ್ರಸಾರವಾದಂತಹ ಸೀರಿಯಲ್ ಇದು ಒನ್ ಆಫ್ ದ ಪಾಪ್ಯುಲರ್ ಸೀರಿಯಲ್ ಅಂತಾನೆ ಹೇಳಬಹುದು.

ಈ ಸೀರಿಯಲ್ ನಲ್ಲಿ ಇವರು ಐಶ್ವರ್ಯ ಅನ್ನುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಇದು ಸ್ವಲ್ಪ ಮಟ್ಟಿಗಾದರೂ ಸ್ವಲ್ಪ ನೆಗೆಟಿವ್ ಶೇಡ್ ಅನ್ನ ಹೊಂದಿರುವಂತಹ ಪಾತ್ರವೇ ಆಗಿತ್ತು ಈ ಪಾತ್ರವನ್ನು ತುಂಬಾನೇ ಅದ್ಭುತವಾಗಿ ನಟಿಸಿ ದಿಯಾ ಪಾಲಕಲ್ ಅವರು ಎಲ್ಲರಿಂದ ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]