ಕೂದಲು ಜಾಸ್ತಿ ಉದುರುತ್ತಿದ್ದರೆ ಈ ಆಯುರ್ವೇದಿಕ್ ಮನೆಮದ್ದನ್ನು ಮಾಡಿನೋಡಿ ಕೇವಲ ಇಪ್ಪತ್ತು ದಿನಗಳಲ್ಲಿ ರಿಸಲ್ಟ್ ಸಿಗುತ್ತದೆ.ವಯಸ್ಸಿನ ಭೇದವಿಲ್ಲದೆ ಇತ್ತೀಚೆಗೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೂ ಕಾಡುತ್ತಿರುವ ಸಮಸ್ಯೆ ತಲೆಕೂದಲಿನ ಸಮಸ್ಯೆ. ತಲೆ ಕೂದಲು ಉದುರುವುದು, ತಲೆ ಕೂದಲು ಬೇಗನೆ ಬೆಳ್ಳಗಾಗುವುದು, ತಲೆಕೂದಲಿನ ಹೊಟ್ಟು, ತಲೆಯಲ್ಲಿ ಸಣ್ಣ ಸಣ್ಣ ಪ್ಯಾಚಸ್ ಇವುಗಳೆಲ್ಲವೂ ಇತ್ತೀಚೆಗೆ ಅತಿ ಸಾಮಾನ್ಯವಾದ ಎಲ್ಲರಿಗೂ ಕಾಡುವ ಸಮಸ್ಯೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಆಧುನಿಕ ಜೀವನ ಶೈಲಿ ನಮ್ಮ ಬದಲಾದ ಆಹಾರ ಪದ್ಧತಿ ಈಗ ನಾವು ತಿನ್ನುತ್ತಿರುವ ಎಲ್ಲಾ ಆಹಾರ ಪದಾರ್ಥಗಳ ತಯಾರಿಕೆಗೆ ಹಾಗೂ ಹಣ್ಣು ತರಕಾರಿಗಳ ಬೆಳವಣಿಗೆಗೆ ರಾಸಾಯನಿಕ ಪದಾರ್ಥಗಳನ್ನು ಹೆಚ್ಚಾಗಿ ಬಳಸುವುದರಿಂದ ಅವು ನಮ್ಮ ದೇಹದ ಮೇಲೆ ಪರಿಣಾಮ ಬೀರಿ ಈ ರೀತಿಯ ಸಮಸ್ಯೆಗಳು ಆಗುತ್ತಿದೆ. ಅದು ಮಾತ್ರವಲ್ಲದೆ ಅತಿಯಾದ ಮಾನಸಿಕ ಒತ್ತಡ, ಉಷ್ಣ ಶರೀರ, ಥೈರಾಡ್, ಶುಗರ್ ಈ ರೀತಿ ಆರೋಗ್ಯ ಸಮಸ್ಯೆಗಳಿಂದಲೂ ಕೂಡ ಕೂದಲು ಉದುರುವುದು ಹೆಚ್ಚಾಗುತ್ತಿದೆ.
ಇಂಥ ಸಮಸ್ಯೆಗಳಿಗೆ ನಾವು ಆಸ್ಪತ್ರೆಯ ಮೊರೆ ಹೋಗುವುದರ ಬದಲು ನಮ್ಮ ಪ್ರಕೃತಿಯಲ್ಲಿ ಸಿಗುವ ನೈಸರ್ಗಿಕ ಗಿಡಮೂಲಿಕೆ ಗಳನ್ನು ಬಳಸಿಕೊಂಡು ಈ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದರ ಜೊತೆಗೆ ಉತ್ತಮವಾಗಿ ಕೂದಲ ಬೆಳವಣಿಗೆಯನ್ನು ಮಾಡಿಕೊಳ್ಳಬಹುದು. ನಮ್ಮ ಪ್ರಕೃತಿಯಲ್ಲಿ ಸಿಗುವಂತಹ ಕೆಲವು ಗಿಡಮೂಲಿಕೆಗಳನ್ನು ನಾವಿಲ್ಲಿ ಹೇಳುತ್ತೇವೆ ಅದನ್ನು ಅದೇ ರೀತಿ ಬಳಸುವುದರಿಂದ ನೀವು ಪರಿಹಾರ ಕಂಡುಕೊಳ್ಳಬಹುದು. ಮೊದಲು ಕಾಡು ಮುಳ್ಳು ಬದನೆಕಾಯಿ ಇದು ನಮ್ಮ ಜಮೀನಿನ ಅಕ್ಕಪಕ್ಕದಲ್ಲಿಯೇ ಸಿಗುತ್ತದೆ ನಂತರ ತುಂಗೆ ಗಿಡದ ಗಡ್ಡೆಯನ್ನು ಸಂಗ್ರಹಿಸಬೇಕು ಜೊತೆಗೆ ಕಾಡು ತುಳಸಿ ಸೊಪ್ಪು ಮತ್ತು ಕಾಚಿ ಸೊಪ್ಪನ್ನು ತೆಗೆದುಕೊಳ್ಳಬೇಕು. ಇವೆಲ್ಲವನ್ನು ಸಂಗ್ರಹಿಸಿಕೊಂಡು ಎಲ್ಲವನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಉದಾಹರಣೆಗೆ ಅರ್ಧ ಅರ್ಧ ಕೆಜಿ ತೆಗೆದುಕೊಂಡು ನಂತರ ಎರಡು ಲೀಟರ್ ಶುದ್ಧ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಬಿಸಿ ಮಾಡಬೇಕು.
ಎಣ್ಣೆ ಚೆನ್ನಾಗಿ ಬಿಸಿಯಾದ ನಂತರ ಈ ಎಲ್ಲ ಮಿಶ್ರಣವನ್ನು ಅದರಲ್ಲಿ ನೆನೆಸಬೇಕು. ಐದು ದಿನಗಳವರೆಗೆ ಅದರಲ್ಲಿಯೇ ಬಿಡಬೇಕು ನಂತರ ಅದನ್ನು ಒಂದು ಬಟ್ಟೆಯನ್ನು ತೆಗೆದುಕೊಂಡು ಶೋಧಿಸಿಕೊಳ್ಳಬೇಕು. ಇದನ್ನು ಹುಡುಗರು ಪ್ರತಿದಿನವೂ ತಲೆಗೆ ಹಚ್ಚಬೇಕು ಹಾಗೂ ಹೆಣ್ಣುಮಕ್ಕಳು ಚೆನ್ನಾಗಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಮರದಿನ ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡಬೇಕು ಈ ರೀತಿ 20 ದಿನಗಳ ಮಾಡಿದರೆ ಆಗಲೇ ನೀವು ನಿಮ್ಮ ಕೂದಲು ಉದುರುವುದು ಕಂಟ್ರೋಲ್ ಗೆ ಬರುವುದನ್ನು ಗಮನಿಸಬಹುದು ಮತ್ತು ಕೂದಲ ಬೆಳವಣಿಗೆಯೂ ಸಹ ಆಗುತ್ತದೆ.