ಇದೆಲ್ಲಾ ನಡೆಯುತ್ತೆ ಸವದತ್ತಿ ಎಲ್ಲಮ್ಮನ ಗುಡಿಯಲ್ಲಿ..ಈ ದೇಗುಲದ ವಿಸ್ಮಯ ಕಣ್ಣಾರೆ ನೋಡಿ

ಇದೆಲ್ಲಾ ನಡೆಯುತ್ತೆ ಸವದತ್ತಿ ಎಲ್ಲಮ್ಮನ ಗುಡಿಯಲ್ಲಿ…ನಮಸ್ತೆ ಸ್ನೇಹಿತರೆ, ಬೆಳಗಾವಿ ಜಿಲ್ಲೆಯ ಸವದತ್ತಿ ಕ್ಷೇತ್ರ ಪುರಾಣ ಪ್ರಸಿದ್ಧ ಕ್ಷೇತ್ರ. ಸೌಗಂಧಿಕಾ ವರ್ತಿ ಅಥವಾ ಸೌಗಂಧಿಕಾ ಪುರ ಎಂಬ ಪ್ರಾಚೀನ ಹೆಸರು ಇಲ್ಲಿಗೆ ಇತ್ತು, ತಾಯಿ ರೇಣುಕಾದೇವಿ ಮತ್ತು ಎಲ್ಲಮ್ಮನ ನೆಲೆಬೀಡು ಇದಾಗಿದೆ. ಇಲ್ಲಿರುವ ದೇವಸ್ಥಾನ ಸುಮಾರು 2000 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ಆದರೆ ಈಗಿರುವ ದೇವಾಲಯವು ಪ್ರಾಚೀನ ವಾಗಿರುವುದಿಲ್ಲ ಇದನ್ನು ಕ್ರಿಸ್ತಶಕ 514 ರಲ್ಲಿ ಬಾಗಿಬೊಮ್ಮಯ್ಯ ನಾಯಕ ಎಂಬುವರು ಕಟ್ಟಿಸಿದರು ಎಂದು ಹೇಳಲಾಗುತ್ತದೆ. ಹಿಂದೆ ಆಗಸ್ತ ಋಷಿಗಳ ಆಶೀರ್ವಾದದಂತೆ ಪುತ್ರ ಕಾಮೇಷ್ಠಿಯಾಗವನ್ನು ಮಾಡಿದ ರೇಣುಕ ರಾಜ ಮತ್ತು ಬೋಗಾವತಿಗೆ ಮಗಳಾಗಿ ರೇಣುಕಾದೇವಿ ಯಜ್ಞಕುಂಡದಲ್ಲಿ ಜನಿಸುತ್ತಾಳೆ. ಆಕೆ ಆದಿಶಕ್ತಿ ಸ್ವರೂಪವಾಗಿ ಸಿದ್ಧ ಚಲ ಪರ್ವತದಲ್ಲಿ ನೆಲೆಸಿ ಜಮದಗ್ನಿ ಯನ್ನು ವರಿಸಿ ಈಗಲೂ ಜನಸಾಮಾನ್ಯರ ಆರಾಧ್ಯದೈವವಾಗಿದ್ದಾಳೆ.ಎಲ್ಲಮ್ಮ ಗುಡ್ಡದ ದೇವಸ್ಥಾನದಲ್ಲಿ ಬೆಳಿಗ್ಗೆ 4-6ಗಂಟೆಗೆ ಮತ್ತು ಸಾಯಂಕಾಲ 4 ರಿಂದ 6.30 ರವರೆಗೆ ಅಭಿಷೇಕ ಪೂಜೆ ನಡೆಯುತ್ತದೆ. ಜೊತೆಗೆ ಚೈತ್ರ ಮಾಸದ ಶುದ್ಧ ಚತುರ್ಥಿಯಂದು ಕಂಕಣಮಂಗಳಸೂತ್ರ ಧಾರಣೆ ನಡೆಯುತ್ತದೆ.

ವೈಶಾಖಮಾಸದ ಶುದ್ಧತೃತಿಯಮಾಸಗಳನ್ನು ಪರಶುರಾಮ ಜಯಂತಿಯನ್ನು ಅದ್ಧೂರಿಯಾಗಿ ನೆರವೇರಿಸಲಾಗುತ್ತದೆ. ಪ್ರಾತಃ ಹುಣ್ಣಿಮೆ, ದವನಹುಣ್ಣಿಮೆಯಂದು ಉತ್ತರ ಕರ್ನಾಟಕದ ಜನರು ಎತ್ತಿನಗಾಡಿಯಲ್ಲಿ ಎತ್ತುಗಳನ್ನು ಅಲಂಕರಿಸಿ ದಾರಿಯುದ್ದಕ್ಕೂ ಸಿಗುವ ಕೆರೆ, ಹೊಳೆ, ನದಿಗಳನ್ನು ಪೂಜಿಸಿ ಎಲ್ಲಮ್ಮನ ಗುಡ್ಡ ದೇವಸ್ಥಾನಕ್ಕೆ ತಲುಪುತ್ತಾರೆ. ಅಲ್ಲೇ ತಂಗುವ ಜನರು ಬೆಳಿಗ್ಗೆ ಎಣ್ಣೆಹೊಂಡದಲ್ಲಿ ಸ್ನಾನ ಮಾಡಿ ನೀರನ್ನು ತಂದು ಮಡಿಯಾಗಿ ಅಡುಗೆ ಮಾಡುತ್ತಾರೆ. ಗಂಡಸರು ಎತ್ತುಗಳನ್ನು ತೊಳೆದು ಅಲಂಕಾರ ಮಾಡುತ್ತಾರೆ.

WhatsApp Group Join Now
Telegram Group Join Now

ನಂತರ ಐದು ಜನ ಜೋಗತಿಯರು ಅಥವಾ ಮುತ್ತೈದೆಯರು ಹಡಲು ತುಂಬುವ ಪೂಜೆ ಮಾಡುತ್ತಾರೆ. ಕಡಬು, ವಡೆ, ಚಪಾತಿ, ಪಲ್ಯ, ಇತರ ಪದಾರ್ಥಗಳನ್ನು ಮಾಡಿ ಹಡಲಿಗೆ ತುಂಬುವ ಪೂಜೆ ಮಾಡುತ್ತಾರೆ ಎಲ್ಲಮ್ಮ ನಿನ್ನ ಪಾದಕ್ಕೆ ಉದೋ ಉದೋ.. ಪರಶುರಾಮ ನಿನ್ನ ಪಾದಕ್ಕೆ ಉದೋ ಉದೋ.. ಎಂದು ಕೂಗುತ್ತ ಪೂಜೆ ಸಲ್ಲಿಸುತ್ತಾರೆ. ನಂತರ ಮುತ್ತೈದೆಯರಿಗೆ ಜೋಗತಿ ಯರಿಗೆ ಉಣಬಡಿಸಿ ನಂತರ ಊಟ ಮಾಡುತ್ತಾರೆ. ದೇವಾಲಯದ ಆವರಣಕ್ಕೆ ಎಲ್ಲಮ್ಮನ ತಾಯಿ ಪೂಜೆ ಮೀಸಲಿಡದೆ ಜನರು ತಮ್ಮ ತಮ್ಮ ಮನೆಯನ್ನು ಸಾರಿಸಿ ಜೋಳದ ತೆನೆ ಬತ್ತದ ತೆನೆ ಎಕ್ಕದ ಹೂವು ಇವುಗಳಿಂದ ಮನೆಯನ್ನು ಅಲಂಕರಿಸಿ ಮನೆಗೆ ಐದು ಜನ ಜೋಗತಿಯರು ಆಮಂತ್ರಿಸಿ ಪೂಜೆ ಕಾರ್ಯ ನಡೆಸುತ್ತಾರೆ. ತಮ್ಮ ಬೇಡಿಕೆ ನೆರವೇರಿದರೆ ಎಲ್ಲಮ್ಮ ತಾಯಿ ದೇವಸ್ಥಾನಕ್ಕೆ ಹೋಗಿ ದೀಪ ಬೆಳಗುತ್ತಾರೆ. ಈ ದೀಪವನ್ನು ಎರಡು ರೀತಿಯಾಗಿ ಹಚ್ಚುತ್ತಾರೆ ಒಂದು ಹೆಣ್ಣೆ ದೀಪ ಮತ್ತೊಂದು ತುಪ್ಪದ ದೀಪ ಹಸು ಕರು ಹಾಕಿದ ಮೊದಲ ಐದು ಅಥವಾ ಹನ್ನೊಂದು ದಿನದ ಹಾಲನ್ನು ಶೇಖರಿಸಿ ಬೆಣ್ಣೆ ತೆಗೆದು ಅದರಿಂದ ಮಾಡಿದ ತುಪ್ಪದಿಂದ ದೀಪ ಬೆಳಗುತ್ತಾರೆ.