2027ರ ಹೊತ್ತಿಗೆ ಭಾರತದಲ್ಲಿ ಡೀಸೆಲ್ ಕಾರುಗಳು ಬ್ಯಾನ್|| ಭಾರತೀಯರ ತಲೆಕೆಡಿಸುತ್ತಿದೆ ಮೋದಿ ಪ್ಲಾನ್…..||
ಒಂದು ಕಾಲ ಇತ್ತು ಕಾರುಗಳನ್ನು ತೆಗೆದುಕೊಳ್ಳುವುದು ಎಂದರೆ ತುಂಬಾ ದೊಡ್ಡ ವಿಷಯ. ಆದರೆ ಈಗ ಹಾಗಲ್ಲ ಕಾರು ತೆಗೆದುಕೊಳ್ಳುವುದು ದೊಡ್ಡ ವಿಷಯ ಅಲ್ಲ. ಈಗ ಬೈಕ್ ಗಳಿಗಿಂತಲೂ ಹೆಚ್ಚಾಗಿ ಕಾರುಗಳೇ ರೋಡಿನಲ್ಲಿ ಓಡಾಡುತ್ತಿವೆ. ಆದರೆ ವಾಹನಗಳ ಓಡಾಟ ಹೆಚ್ಚಾದಂತೆಲ್ಲ ಅದರಿಂದ ತುಂಬಾ ಪರಿಣಾಮ ಆಗುತ್ತದೆ ಎನ್ನುವುದು ಕೂಡ ನಿಮಗೆ ಗೊತ್ತಿರಬೇಕು.
ಎತ್ತಿನ ಗಾಡಿ ಇರುವಾಗ ಎಲ್ಲವೂ ಸರಿಯಾಗಿತ್ತು ಓಡಾಡುವುದಕ್ಕೆ ಸ್ವಲ್ಪ ಕಷ್ಟ ಆಗಿ ಟೈಮ್ ತೆಗೆದುಕೊಂಡರು ಜನ ಆರೋಗ್ಯದಿಂದ ಬದುಕುತ್ತಿ ದ್ದರು. ಓಡಾಡಲು ಹೆಚ್ಚು ಸಮಯ ತೆಗೆದುಕೊಂಡಂತೆ ಹೆಚ್ಚು ಕಾಲದವ ರೆಗೆ ಬದುಕುತ್ತಾ ಇದ್ದರು. ಆದರೆ ಈಗ ಓಡಾಡುವುದಕ್ಕೆ ಸಮಯ ಕಡಿಮೆ ತೆಗೆದುಕೊಳ್ಳುತ್ತದೆ ಅದರ ಜೊತೆಗೆ ಬದುಕುವ ಸಮಯ ಕೂಡ ಕಡಿಮೆ ಆಗಿದೆ.
ಅದಕ್ಕೆ ಕಾರಣ ಏನು ಅನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ ಹೀಗಾಗಿ ಆಗಿರುವ ಮಾಲಿನ್ಯವನ್ನು ತಡೆಗಟ್ಟುವುದಕ್ಕೆ ಸಾಧ್ಯವಿಲ್ಲ. ಆದರೆ ಮುಂದೆ ಆಗುವ ಮಾಲಿನ್ಯವನ್ನು ಖಂಡಿತ ವಾಗಿಯೂ ತಡೆಗಟ್ಟಬಹುದು.ಹೀಗಾಗಿ ಸರ್ಕಾರ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ಅದರಲ್ಲಿ ಈ ವಾಹನಗಳಿಗೆ ಕಡಿವಾಣ ಹಾಕುವುದು ಕೂಡ ಒಂದು. ಹೀಗಾಗಿ ಸರ್ಕಾರ ಡೀಸೆಲ್ ಕಾರುಗಳನ್ನು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಬ್ಯಾನ್ ಮಾಡುವುದಕ್ಕೆ ಹೊರಟಿದೆ.
ಕೆಲವು ವರ್ಷಗಳ ಹಿಂದೆ ಸರ್ಕಾರ ಒಂದು ಕಮಿಟಿ ಫಾರ್ಮ್ ಮಾಡಿತ್ತು ಈ ಕಮಿಟಿಯ ಹೆಸರು ಏನರ್ಜಿ ಟ್ರಾನ್ಸಷನ್ ಅಡ್ವೈಸರಿ ಕಮಿಟಿ. ಇದೇ ಕಮಿಟಿ ಈಗ ಇಂಥದೊಂದು ಪ್ರಸ್ತಾವನೆ ಸಲ್ಲಿಸಿರುವುದು. ಕಮಿಟಿ ಪ್ರಸ್ತಾವನೆ ಸಲ್ಲಿಸಿದರೆ ಬ್ಯಾನ್ ಆಗಿಬಿಡುತ್ತದೆ ಅಂದಲ್ಲ. ಪ್ರಸ್ತಾವನೆ ಏನೋ ಸಲ್ಲಿಸಿದೆ ಆದರೆ ಇದನ್ನು ಜಾರಿಗೆ ತರುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು.
ನವೀಕರಿಸಬಹುದಾದಂತಹ ಇಂಧನಗಳನ್ನು ಹೆಚ್ಚು ಬಳಕೆ ಮಾಡುವು ದಕ್ಕೆ ಈ ಕಮಿಟಿ ಒತ್ತು ನೀಡಿದೆ. ಹೀಗೆ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಕೂಡ ಈ ಕಮಿಟಿ ನೀಡಿದೆ. ಭಾರತ ಈ ವಿಚಾರದಲ್ಲಿ ಒಂದು ಗುರಿಯನ್ನು ಇಟ್ಟಿದೆ. 2070ರ ಹೊತ್ತಿಗೆ ಸಂಪೂರ್ಣವಾಗಿ ಮಾಲಿನ್ಯ ಮುಕ್ತ ದೇಶವನ್ನಾಗಿ ಮಾಡಬೇಕು ಎನ್ನುವುದು ದೇಶದ ಗುರಿಯಾಗಿದೆ.
ಹೀಗಾಗಿ ಏನೆಲ್ಲ ಬದಲಾವಣೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಈ ಕಮಿಟಿಯನ್ನು ರಚನೆ ಮಾಡಲಾಗಿದೆ. ಗ್ರೀನ್ ಎನರ್ಜಿಯನ್ನು ಯಾವ ರೀತಿ ಬಳಸಿಕೊಳ್ಳಬೇಕು ಈಗ ಇರುವ ಇಂಧನದಲ್ಲಿ ಯಾವೆಲ್ಲ ಬದಲಾ ವಣೆಯನ್ನು ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಹೇಳಲಾಗಿತ್ತು. ಹೀಗಾಗಿ ಈ ಕಮಿಟಿ ಈಗ ವರದಿ ನೀಡಿದೆ, ಈ ಕಮಿಟಿ ನೀಡಿರುವ ವರದಿಯಲ್ಲಿ ತುಂಬಾ ಗಮನಿಸಬೇಕಾದಂತಹ ಅಂಶ ಅಂದರೆ ಅದು ಡೀಸೆಲ್ ವಾಹನಗಳ ಬ್ಯಾನ್ ವಿಚಾರ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.