ದೇವರಾಜೇಗೌಡ ಲೈಪ್ ಸ್ಟೋರಿ ವರದಕ್ಷಿಣೆ ಕೇಸಲ್ಲಿ ಜೈಲು 2 ಮದುವೆ…ಮೊದಲ ಹೆಂಡತಿಯನ್ನು ಬಿಟ್ಟಿದ್ಯಾಕೆ..
ಹೆಣ್ಣುಮಕ್ಕಳ ಬಗ್ಗೆ ದೊಡ್ಡ ದೊಡ್ಡದಾಗೆ ಬಾಷಣ ಮಾಡುತ್ತಿದ್ದ ಲಾಯರ್ ದೇವರಾಜೇಗೌಡ ಈಗ ಪೋಲಿಸರ ಅತಿಥಿಯಾಗಿದ್ದಾರೆ ಹಾಗಾದರೆ ಈ ದೇವರಾಜೇಗೌಡ ಯಾರು ಇವರ ಹಿನ್ನಲೆ ಏನು ದೇವೆಗೌಡರ ಕುಟುಂಬದ ಮೇಲೆ ಇವರಿಗ್ಯಾಕೆ ಸಿಟ್ಟು ವರದಕ್ಷಿಣೆ ಕೇಸ್ ನಲ್ಲಿ ದೇವರಾಜೇಗೌಡ ಜೈಲ್ ಗೆ ಹೋಗಿದ್ದರ ಇವರು ಮಾಡಿರುವಂತಹ ಆಸ್ತಿ ಎಷ್ಟು ಎಲ್ಲವನ್ನು ಈಗ ತಿಳಿಯೋಣ
ರೈತ ಕುಟುಂಬದಲ್ಲಿ ದೇವರಾಜೇಗೌಡ ಜನನ ಜಿ ದೇವರಾಜೇಗೌಡ 1976 ಆಗಸ್ಟ್ 14 ರಂದು ಜನಿಸಿದರು ಇವರ ತಂದೆ ಗುಂಡೆಗೌಡ ತಾಯಿ ಹುಚ್ಚಮ್ಮ 6 ಜನ ಮಕ್ಕಳಲ್ಲಿ ಇವರು ಕೊನೆಯವರು ಇವರಿಗೆ ಒಬ್ಬ ಅಣ್ಣ ಮತ್ತು ನಾಲ್ವರು ಅಕ್ಕಂದಿರು ಇದ್ದಾರೆ ಹಾಸನ ಜಿಲ್ಲೆಯ ಹೊಳೆನರಸಿಪುರದ ತಾಲೂಕಿನ ಹಳೆಕೋಟೆ ಕಾಮಸಮುದ್ರ ಎಂಬ ಗ್ರಾಮ ಇವರು ಹುಟ್ಟೂರು ಇವರ ತಾಯಿಯ ಊರು ಹೊಳೆನರಸಿಪುರದ ಅರದೂರು ದೇವರಾಜೇಗೌಡರಿಗೆ 9 ವರ್ಷವಿದ್ದಾಗ ಇವರ ತಂದೆ ತೀರಿಕೊಂಡರು
ನಂತರ ಅವರ ತಾಯಿ ಮತ್ತ ಅಕ್ಕಂದಿರು ಇವರನ್ನು ಕಷ್ಟ ಪಟ್ಟು ಚೆನ್ನಾಗಿ ಓದಿಸಿದರು ಇವರದ್ದು ಮಿಡಲ್ ಕ್ಲಾಸ್ ರೈರ ಕುಟುಂಬ ಕಷ್ಟವಿದ್ದರಂದ ಬರಿ ಅಳಸಂಡೆ ಕಾಳೆ ಇವರ ಊಟವಾಗಿತ್ತು ಪ್ರಾರ್ಥಮಿಕ ಶಿಕ್ಚಣವನ್ನು ಕಾಮಸಮುದ್ರದ ಶಾಲೆಯಲ್ಲಿ ಮುಗಿಕೊಂಡಿದ್ದರು ನಂತರ 10ನೇ ತರಗತಿಯನ್ನು ಹಳೆಕೋಟೆಯಲ್ಲಿ ಮುಗಿಸಿದರು.ಮುಂದೆ ಓದುವ ಆಸೆ ಇದ್ದರು ಬಡತನ ಅಡ್ಡಿಯಾಯಿತು.
ಓದು ಬಿಟ್ಟು ಬೆಂಗಳೂರಿಗೆ ಪಯಣ ಓದು ನಿಲ್ಲಿಸಿದ ದೇವರಾಜೇಗೌಡ ಕವಲ 3 ರೂ ಇಡಿದು ಬೆಂಗಳೂರಿಗೆ ಬಂದು ಮೆಜೆಸ್ಟಿಕ್ ಗೆ ಬಂದ ಇವರಿಗೆ ದಿಕ್ಕೆ ತೊಚದಂತಾಗಿತ್ತು ಕೆ ಆರ್ ಪುರಂ ನ ಹೋಟೆಲ್ ಮಾಲಿಕರೊಬ್ಬರು ಇವರನ್ನು ಅವರ ಜೊತೆ ಕರೆದುಕೊಂಡೊಗಿ ಕೆಲಸ ಕೊಟ್ಟರು ಪ್ಲೇಟ್ ಲೋಟ್ ತೊಳೆದುಕೊಂಡಿರಬೇಕಾಗಿತ್ತು .ಒಂದು ದಿನ ದೇವರಾಜೇಗೌಡರು ಹೋಟೆಲ್ ಬಿಟ್ಟು ಯಾರಿಗೂ ಹೇಳದೆ ಮಾರ್ಕೆಟ್ ಹೋದರು
ನಂತರ ರಾಘವೇಂದ್ರ ಟ್ರ್ಯಾವೆಲ್ ಗೆ ಹೋಗಿ ಕೆಲಸ ಕೇಳಿದರು ಅಲ್ಲಿ ಕೆಲಸಕ್ಕೆ ಸೇರಿಕೊಂಡ ದೇವರಾಜೇಗೌಡ ನಂತರ ಉಳಿದ ಸಮಯದಲ್ಲಿ ಸೀರೆ ಅಂಗಡಿಗೆ ಸೇರಿಕೊಂಡರು ಇವರ ಬುದ್ದಿವಂತಿಕೆ ಗಮನಿಸಿದ ಟ್ರ್ಯಾವೆಲ್ ಮಾಲಿಕ ಶಿವಣ್ಣ ದೇವರಾಜೇಗೌಡ್ರನ್ನ ಓದಿಸೊಕೆ ನಿರ್ಧಾರ ಮಾಡಿದರು ನಂತರ ಕಾಲೇಜು ಸೇರಿಕೊಂಡ ದೇವರಾಜೇಗೌಡ್ರು ಶಿಕ್ಷಣ ಮುಂದುವರೆಸಿ ಬಿ ಎ ಮುಗಿಸಿದರು ಇದರ ನಡುವೆ ಎಸ್ ಆರ್ ಎಸ್ ಟ್ರ್ಯಾವೆಲ್ ನಲ್ಲಿ ಡ್ರೈವರ್ ಅಗಿ ಸಹ ಕೆಲಸ ಮಾಡಿದ್ದರು ಇದೆ ಸಮಯದಲ್ಲಿ ಸ್ವಲ್ಪ ಹಣ ಕೂಡ ಚೆನ್ನಾಗೆ ಸಂಪಾದನೆ ಮಾಡಿಕೊಂಡರು.
ರಾಜಕೀಯ ಪ್ರವೇಶ ಮತ್ತು ರೇವಣ್ಣ ಜೊತೆ ದ್ವೇಷ ಊರಿನಲ್ಲಿತಾಯಿ ಒಬ್ಬರೆ ಇದ್ದುದರಿಂದ ಕಾಲಕ್ರಮೇಣ ದೇವರಾಜೇಗೌಡ ಊರಿಗೆ ಓಗಿ ನೆಲೆಸಿದ್ದರು 1999 ರಲ್ಲಿ ದಕಾಂಗ್ರೆಸ್ ರಾಜಕೀಯ ಪ್ರವೇಶ ಮಾಡಿದರು ಆಗ ಹಾಸನ ಸಂಸದರಾಗಿದ್ದ ಪುಟ್ಟಸ್ವಾಮಿ ಗೌಡರ ಜೊತೆ ಗುರುತಿಸಿಕೊಂಡರು ಕಾಂಗ್ರೆಸ್ ತಾಲೂಕು ಅಧ್ಯಕ್ಚರಾಗಿ,ಜಿಲ್ಲಾ ಘಟಕದ ಅಧ್ಯಕ್ಷರಾಗಿಯೂ ದೇವೆಗೌಡರು ಕಾರ್ಯ ನಿರ್ವಹಿಸಿದರು.
ಇವರ ತಾಯಿಯ ಹುಟ್ಟುರಿನ ಆಸ್ತಿ ದೇವೆಗೌಡರ ಕುಟುಂಬದ ಪಾಲಾಗಿದೆ ಎಂದು ಬೆಸರ ಕೂಡ ಇವರಲ್ಲಿ ಇತ್ತು ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಳ್ಳುತ್ತಿದ ಇವರನ್ನು ರೇವಣ್ಣ ಬೇಟಿಯಾದರು ಕಾಂಗ್ರೆಸ್ ನಿಂದ ಹೊರಬರುವಂತೆ ಒತ್ತಾಯ ಮಾಡಿದರು ಆದರೆ ಅದಕ್ಕೆ ದೇವರಾಜೇಗೌಡ ಒಪ್ಪಲಿಲ್ಲ.ವರದಕ್ಷಿಣೆ, ಕಿರುಕುಳ ಕೇಸ್ ನಲ್ಲಿ ಅರೆಸ್ಟ್ ದೇವರಾಜೇಗೌಡ ಹೇಳೊ ಪ್ರಕಾರ ರೇವಣ್ಣನ ಮಾತಿಗೆ ಒಪ್ಪದ ಕಾರಣ ಇವರ ಕುಟುಂಬದ ವಿಷಯಕ್ಕೆ ರೇವಣ್ಣನ ಕುಟುಂಬ ಎಂಟ್ರಿ ಕೊಟ್ಟಿತ್ತು ದೇವರಾಜೇಗೌಡ ರ ಕುಟುಂಬದ ಸಣ್ಣ ಪುಟ್ಟ ಗಲಾಟೆಯನ್ನು ಅಸ್ತ್ರ ಮಾಡಿಕೊಂಡ ರೇವಣ್ಣ ದೇವರಾಜೇಗೌಡ ಪತ್ನಿಗೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸುವಂತೆ ಮಾಡಿದರು.
13 ದಿನ ದೇವರಾಜೇಗೌಡ ಜೈಲಿನಲ್ಲಿದ್ದರು ನಂತರ ಪತ್ನಿಯೊಂದಿಗೆ ರಾಜಿಯಾಗಿ ಒಟ್ಟಿಗೆ ಜೀವನ ಸಾಗಿಸೊಕೆ ಶುರು ಮಾಡಿದರು ಆದರೆ ರೇವಣ್ಣ ಕುಟುಂಬದ ಮೇಲೆ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು 2010ರಲ್ಲಿ ಬೆಂಗಳೂರಿನಲ್ಲಿ ಇವರನ್ನು ಹೋಳೆನರಸಿಪುರದ ಪೋಲಿಸರು ಅರೆಸ್ಟ್ ಮಾಡಿದ್ದರು ಹೊಳೆನರಸಿಪುರಕ್ಕೆ ಕರೆದುಕೊಂಡೊಗಿ ಬಟ್ಟೆ ಬಿಚ್ಚಿ ಬರಿ ಒಳ ಉಡುಪಿನಲ್ಲಿ ಕುರಿಸಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡೀಯೋ ನೋಡಿ.