ಮಕ್ಕಳಿಗೆ ದುಡ್ಡು ಕೊಡಬೇಡಿ ಸುಧಾಮೂರ್ತಿಯವರು ಹೀಗೆ ಹೇಳಿದ್ಯಾಕೆ ಗೊತ್ತಾ? » Karnataka's Best News Portal

ಮಕ್ಕಳಿಗೆ ದುಡ್ಡು ಕೊಡಬೇಡಿ ಸುಧಾಮೂರ್ತಿಯವರು ಹೀಗೆ ಹೇಳಿದ್ಯಾಕೆ ಗೊತ್ತಾ?

ಮಕ್ಕಳಿಗೆ ದುಡ್ಡು ಕೊಡಬೇಡಿ ಸುಧಾಮೂರ್ತಿಯವರ ಸಲಹೆ ತಪ್ಪದೇ ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಪೋಷಕರ ಮಕ್ಕಳಿಗೆ ಹೆಚ್ಚಿನ ಹಣವನ್ನು ಕೊಡಬೇಡಿ ಒಂದು ವೇಳೆ ನೀವು ಅವರಿಗೆ ಹಣವನ್ನು ಕೊಟ್ಟರು ಕೂಡ ಯಾವುದಕ್ಕೆ ಖರ್ಚು ಮಾಡಿದ್ದಿರ ಅಂತ ಅವರಿಗೆ ಲೆಕ್ಕ ಕೇಳಿ. ಇದರ ಜೊತೆಗೆ ಆದಷ್ಟು ಹೊರಗಿನ ತಿಂಡಿಯನ್ನು ಕಡಿಮೆ ಮಾಡಿ ಮನೆಯಲ್ಲಿ ಒಳ್ಳೆಯ ಊಟವನ್ನು ಮಾಡುವುದಕ್ಕೆ ಹೇಳಿ. ಏಕೆಂದರೆ ಆಚೆ ಕಾಲೇಜುಗಳಲ್ಲಿ ದೊರೆಯುವಂತಹ ಊಟ ಅಷ್ಟೊಂದು ಶುಚಿ ಮತ್ತು ಆರೋಗ್ಯಕರವಾಗಿ ಇರುವುದಿಲ್ಲ. ಇದರ ಜೊತೆಗೆ ನಿಮ್ಮ ಮಕ್ಕಳ ಗುಣಗಳ ಬಗ್ಗೆ ಸ್ವಲ್ಪ ಗಮನವನ್ನು ಹರಿಸಬೇಕಾಗುತ್ತದೆ ನಿಮಗೆ ಏನಾದರೂ ಅನುಮಾನ ಬಂದರೆ ತಕ್ಷಣ ಅದನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಅಲ್ಲದೆ ಉತ್ತಮ ಸಲಹೆಗಾರರಿಂದ ಇದಕ್ಕೆ ಉಪಾಯವನ್ನು ಕಂಡುಕೊಳ್ಳಬೇಕು. ಮುಂದಿನ ಪೀಳಿಗೆಗೆ ನಿಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರುವುದು ತುಂಬಾನೆ ಒಳ್ಳೆಯದು. ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ನೀವು ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಅವರ ಆಗುಹೋಗುಗಳ ಬಗ್ಗೆ ಒಂದು ಕಣ್ಣನ್ನು ಇಟ್ಟಿರಿ ಮಕ್ಕಳು ಹದಿಹರಿಯದ ವಯಸ್ಸಿಗೆ ಬಂದಾಗ ದಾರಿತಪ್ಪುವ ಅಂತಹ ಲಕ್ಷಣಗಳು ಇರುತ್ತದೆ.

ಹಾಗಾಗಿ ಇಂತಹ ಸಮಯದಲ್ಲಿ ಅವರ ಬೆನ್ನೆಲುಬಾಗಿ ನೀವು ನಿಲ್ಲಬೇಕು ಅವರು ಮಾಡುವಂತಹ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಅವರ ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ನೀವು ಹದ್ದಿನ ಕಣ್ಣನ್ನು ಹೊಂದಿರಬೇಕು ಏಕೆಂದರೆ ಒಂದು ಸ್ವಲ್ಪ ಎಡವಿದರೂ ಕೂಡ ಅವರ ಉತ್ತಮವಾದಂತಹ ಭವಿಷ್ಯ ಹಾಳಾಗುವ ಸಂಭವ ಇರುತ್ತದೆ. ಮಕ್ಕಳಿಗೆ ಹಣ ಕೊಟ್ಟು ಅವರ ಜೀವನ ಹಾಳದ ನಂತರ ನೀವು ಯೋಚನೆ ಮಾಡುವುದರ ಬದಲಾಗಿ. ನಿಮ್ಮ ಮಕ್ಕಳಿಗೆ ಈಗಿಂದಲೇ ಉತ್ತಮವಾದಂತಹ ಭವಿಷ್ಯವನ್ನು ರೂಪಿಸಲು ನೀವು ಮುಂದಾಗಬೇಕಾಗುತ್ತದೆ. ಹಾಗಾಗಿ ಪೋಷಕರಲ್ಲಿ ನನ್ನದೊಂದು ಮನವಿ ಯಾವುದೇ ಕಾರಣಕ್ಕೂ ಕೂಡ ಮಕ್ಕಳಿಗೆ ಹಣದ ಆಮಿಷ ತೋರಿಸಬೇಡಿ. ನೀವು ಪಡುವಂತಹ ಕಷ್ಟವನ್ನು ಮಕ್ಕಳಿಗೆ ತೋರಿಸಿ ಅವರನ್ನು ಬೆಳೆಸಿ ಈ ಕಷ್ಟದ ದಿನಗಳು ಅವರ ಉತ್ತಮ ಭವಿಷ್ಯವನ್ನು ರೂಪಿಸುತ್ತದೆ.

[irp]


crossorigin="anonymous">