ಅಂದು ಆ ಸಿನಿಮಾ ಮಾಡಬೇಕಾದರೆ ದರ್ಶನ್ ಗೆ ಗೋಲ್ಡನ್ ಸ್ಟಾರ್ ಮಾಡಿದ್ದ ಸಹಾಯ ಏನ್ ಗೊತ್ತಾ?

ನಟ ದರ್ಶನ್ ಗೋಲ್ಡನ್ ಸ್ಟಾರ್ ಗಣೇಶ್ ಸಹಾಯ ನೆನೆದದ್ದು ಏಕೆ? ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಎಂಬುವುದು ಉದ್ಯೋಗವನ್ನು ಅರಸಿ ರಾಜಧಾನಿಗೆ ಬರುವ ಬಹುತೇಕ ಎಲ್ಲರಿಗೂ ಒಂದು ರೀತಿಯ ಹೆಬ್ಬಾಗಿಲು ಇದ್ದಂತೆ. ಡಿ ಬಾಸ್​ ಸಹ ಮೆಜೆಸ್ಟಿಕ್ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರೇ. ತಮ್ಮ ಮೊದಲ ಅಭಿನಯದ ಮೆಜೆಸ್ಟಿಕ್ ಚಿತ್ರಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಮೆಜೆಸ್ಟಿಕ್ ಚಿತ್ರಕ್ಕೂ ಮುನ್ನ ಇದ್ದ ಪರಿಸ್ಥಿತಿ ನೆನೆದು ಭಾವುಕರಾದರು. ಇದೇ ವೇಳೆ ಅಂದಿನ ತಮ್ಮ ಪರಿಸ್ಥಿತಿ ಬಗ್ಗೆ ದರ್ಶನ್ ಭಾವುಕರಾಗಿ ಮಾತನಾಡಿದರು. ಮೆಜೆಸ್ಟಿಕ್ ಚಿತ್ರದ ನಿರ್ದೇಶಕ ಪಿ.ಎನ್. ಸತ್ಯ ಮತ್ತು ನಿರ್ಮಾಪಕರಾದ ರಾಮ್ ಮೂರ್ತಿ ಮತ್ತು ರಮೇಶ್ ಅವರನ್ನು ನೆನೆದ ದರ್ಶನ್, ಆವತ್ತು ಇವರು ನೀಡಿದ ಬೆಂಬಲ ಇಂದಿಗೂ ನನ್ನ ಸ್ಯಾಂಡಲ್ ವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದೆ ಎಂದರು.

ಈಗ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅವರು ಬಹುಬೇಡಿಕೆಯ ಸ್ಟಾರ್‌ ನಟ ಆದರೆ 2002ರ ಫೆ.8ರಂದು ಅವರ ಮೆಜೆಸ್ಟಿಕ್‌ ಸಿನಿಮಾ ತೆರೆಕಂಡಾಗ ಅವರು ಕೂಡ ಎಲ್ಲರಂತೆ ಹೊಸಬರಾಗಿದ್ದರು. ಸಾಕಷ್ಟು ಆಸೆ-ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗಕ್ಕೆ ಕಾಲಿಟ್ಟ ದರ್ಶನ್‌ ಅವರು ಹೀರೋ ಆಗಿ ನಟಿಸಿದ ಆ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಸಿಕ್ಕಿತು. ಅಂದು ನನಗೆ ಒಂದು ಕರೆ ಬಂತು ಬೆಂಗಳೂರಿನ ಪ್ರಸಿದ್ದ ಹೋಟೆಲ್ನಲ್ಲಿ ನಿರ್ಮಾಪಕ ನಿರ್ದೇಶಕರನ್ನು ಭೇಟಿ ಮಾಡುವಂತೆ, ಆದರೆ ನನಗೆ ಬೆಂಗಳೂರು ಹೊಸದು ಹೇಗೆ ಹೋಗಬೇಕು ಎಂಬುದು ನನಗೆ ತಿಳಿದಿರಲಿಲ್ಲ. ಸರಿ ಹೇಗೋ ವಿಚಾರಿಸಿಕೊಂಡು ಹೋಗೋಣ ಎಂದು ನಿರ್ಧರಿಸಿದೆ, ಆದರೆ ಹೋಗಲು ನನ್ನ ಬಳಿ ಯಾವುದೇ ತರಹದ ಗಾಡಿ ಇರಲಿಲ್ಲ, ಆಗ ನಾನು ಗಣೇಶ್ ಅವರಿಗೆ ಕರೆ ಮಾಡಿ ಹೀಗೆ ಒಂದು ಹೋಟೆಲ್ಗೆ ಹೋಗಬೇಕೆಂದು ತಿಳಿಸಿದೆ.

WhatsApp Group Join Now
Telegram Group Join Now

ಆಗ ಗಣೇಶ್ ನನಗೆ ಆತನ ಬಳಿ ಇದ್ದ ಕೆಂಪು ಬಣ್ಣದ ಸಮೋರ ಗಾಡಿಯನ್ನು ನೀಡಿದ, ಅಂದು ಆತ ನೀಡಿದ ಗಾಡಿಯಿಂದ ನಾನು ಹೋಗಿ ನಿರ್ದೇಶಕ ನಿರ್ಮಾಪಕರನ್ನು ಭೇಟಿ ಮಾಡಿದೆ ಇದರಿಂದ ನನಗೆ ಮೆಜೆಸ್ಟಿಕ್ ಚಿತ್ರದಲ್ಲಿ ನಟಿಸುವಂತೆ ಅವಕಾಶ ಸಿಕ್ಕಿತ್ತು. ಎಂದು ತಮ್ಮ ಮೆಜೆಸ್ಟಿಕ್ ಚಿತ್ರದ ಬಗ್ಗೆ, ಅವಕಾಶ ಸಿಕ್ಕ ಬಗ್ಗೆ, ಮಾತನಾಡುವಾಗ ನಟ ದರ್ಶನ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ನೆನೆದರು. ಹೀಗೆ ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು.. ‘ಧ್ರುವ’ ತಾರೆಯಾಗಿ ಮಿಂಚಿ.. ‘ಕಿಟ್ಟಿ’ ಅನ್ನೋ ಪಟ್ಟ ಗಿಟ್ಟಿಸ್ಕೊಂಡು ರೋಸ್​ ಹಿಡಿದ ‘ಕರಿಯ’ ಇದೀಗ ಅಭಿಮಾನಿಗಳ ಪಾಲಿನ ‘ದಾಸ’.. ಸ್ಯಾಂಡಲ್​​ವುಡ್​ನ ‘ಸಾರಥಿ’ ‘ಚಕ್ರವರ್ತಿ’ ‘ಚಾಲೆಂಜಿಂಗ್ ಸ್ಟಾರ್’ ಆಗಿ ಮೆರೆಯುತ್ತಿದ್ದಾರೆ.

[irp]